ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ರೈಲ್ವೆ ಕೆಳ ಸೇತುವೆ ಉದ್ಘಾಟನೆ

Last Updated 19 ಆಗಸ್ಟ್ 2020, 15:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಮಂಟೂರಿನ ಬಳಿ ನಿರ್ಮಿಸಿರುವ ನೂತನ ರೈಲ್ವೆ ಕೆಳ ಸೇತುವೆಯನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಮಂಗಳವಾರ ಉದ್ಘಾಟಿಸಿದರು.

ಭಾರತೀಯ ಆಹಾರ ನಿಗಮ ದ್ವಾರದ ಲೆವೆಲ್ ಕ್ರಾಸಿಂಗ್‌ ಬಳಿ ಇರುವ ಈ ಸೇತುವೆಯನ್ನು ₹4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಚಿಕ್ಕಜಾಜೂರು ಮತ್ತು ಹುಬ್ಬಳ್ಳಿ ಮಧ್ಯೆ ಜೋಡಿ ಹಳಿ ಮಾರ್ಗದ ನಿರ್ಮಾಣದ ಭಾಗವಾಗಿ, 2018ರಲ್ಲಿ ಸೇತವೆ ಕಾಮಗಾರಿ ಆರಂಭಿಸಲಾಗಿತ್ತು.

ಸಿಎಒ ಕನ್‌ಸ್ಟ್ರಕ್ಷನ್‌ನ ಕೆ.ಸಿ. ಸ್ವಾಮಿ ಮತ್ತು ಸಿಇ ಕನ್‌ಸ್ಟಕ್ಷನ್‌ನ ಪ್ರೇಮ್ ನಾರಾಯಣ್ ಮಾರ್ಗದರ್ಶನದಲ್ಲಿ, ಲಾಕ್‌ಡೌನ್ ಮತ್ತು ಕೊರೊನಾ ಆತಂಕದ ನಡುವೆಯೂ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT