ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿತಾರ್ ವಾದಕ ಛೋಟೆ, ಗ್ರಂಥಾಲಯ ವಿಜ್ಞಾನಿ ಗುಂಜಾಳಗೆ ‘ರಾಜ್ಯೋತ್ಸವ’ ಗರಿ

Last Updated 28 ಅಕ್ಟೋಬರ್ 2019, 19:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಿರಿಯ ಗ್ರಂಥಾಲಯ ವಿಜ್ಞಾನಿ, ತಾಲ್ಲೂಕಿನ ಕೋಳಿವಾಡದ ಡಾ.ಎಸ್‌.ಆರ್‌.ಗುಂಜಾಳ ಅವರು ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಯಪ್ಪ ಹಾಗೂ ರುದ್ರಮ್ಮ ಗುಂಜಾಳ ದಂಪತಿಯ ಪುತ್ರರಾಗಿ ಕೋಳಿವಾಡದಲ್ಲಿ 1932 ಜೂನ್‌ 15ರಂದು ಜನಿಸಿದ ಅವರು, ಹಲವು ಅಡೆತಡೆಗಳ ನಡುವೆ ಶಿಕ್ಷಣ ಪಡೆದಿದ್ದಾರೆ.

ಗ್ರಂಥಾಲಯ ವಿಜ್ಞಾನ ಕುರಿತು ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಅವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ ಕರ್ನಾಟಕದ ಅನೇಕ ಕಾಲೇಜುಗಳಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅವರು 60 ಪುಸ್ತಕಗಳನ್ನು ರಚಿಸಿದ್ದಾರೆ. ಗುಂಜಾಳ ಅವರ ಮಾರ್ಗದರ್ಶನದಲ್ಲಿ 18 ವಿದ್ಯಾರ್ಥಿಗಳು ಪಿಎಚ್‌. ಡಿ ಪದವಿ ಪಡೆದಿದ್ದು, ಗುಂಜಾಳ ಅವರ ಕುರಿತು ವಿದ್ಯಾರ್ಥಿಯೊಬ್ಬರು ಪಿಎಚ್‌.ಡಿ ಮಾಡಿದ್ದಾರೆ.

ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಡೆದಾಡುವ ವಿಶ್ವಕೋಶ ‍ಪ್ರಶಸ್ತಿ, ಬಸವ ಪಂಡಿತ ಪ್ರಶಸ್ತಿ, ಶರಣ ಸಾಹಿತ್ಯ, ಸಾಹಿತ್ಯ ಶ್ರೀ, ಸೇವಾ ರತ್ನ, ಶರಣ ಶ್ರೀ, ಶಿಕ್ಷಣ ಶ್ರೀ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. 2018ರಲ್ಲಿ ಸ್ವಂತ ಗ್ರಾಮದಲ್ಲಿ ನಡೆದ ಹುಬ್ಬಳ್ಳಿ ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು.

ಸ್ವಗ್ರಾಮದಲ್ಲಿ ಆರ್‌.ಆರ್‌. ಗುಂಜಾಳ ಪ್ರಾಥಮಿಕ ಶಾಲೆ ನಡೆಸುತ್ತಿದ್ದಾರೆ. ಬಡ, ದಲಿತ ಹೆಣ್ಣುಮಕ್ಕಳಿಗಾಗಿ ಪಿಯು ಕಾಲೇಜು ತೆರೆಯಬೇಕು ಎಂಬ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

‘ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದಕ್ಕೆ ಖುಷಿಯಾಗಿದೆ. ಶಿಕ್ಷಣ ಮತ್ತು ಗ್ರಂಥಾಲಯ ಇಲಾಖೆಗೆ ಸಿಕ್ಕ ಗೌರವ ಇದಾಗಿದೆ. ಈ ಪ್ರಶಸ್ತಿ ಮೊತ್ತವನ್ನು ಕಾಲೇಜು ನಿರ್ಮಾಣಕ್ಕೆ ವಿನಿಯೋಗಿಸುತ್ತೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT