ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೌರಕಾರ್ಮಿಕರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಣೆ

Published : 19 ಆಗಸ್ಟ್ 2024, 16:21 IST
Last Updated : 19 ಆಗಸ್ಟ್ 2024, 16:21 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಸೇವಾಭಾರತಿ ಟ್ರಸ್ಟ್ ವತಿಯಿಂದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ರಾಖಿ ಕಟ್ಟುವ ಮೂಲಕ ‘ರಕ್ಷಾ ಬಂಧನ’ ಹಬ್ಬವನ್ನು ಇಲ್ಲಿನ ಎಚ್‌ಡಿಎಂಸಿ ನೌಕರರ ಸಭಾಂಗಣದಲ್ಲಿ ಸೋಮವಾರ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಸೇವಾಭಾರತಿ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ ಮಾತನಾಡಿ, ‘ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪ್ರತಿ ನಿತ್ಯ ನಗರದ ಸ್ವಚ್ಛತೆಗೆ ಶ್ರಮಿಸುತ್ತಾರೆ. ಅವರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು’ ಎಂದರು.

‘ಪೌರಕಾರ್ಮಿಕರ ಸಮಸ್ಯೆಗಳಿಗೆ ಸೇವಾಭಾರತಿ ಸದಾ ಸ್ಪಂದಿಸಲಿದೆ. ಅವರು ನಮ್ಮ ಕುಟುಂಬ ಸದಸ್ಯರಿದ್ದಂತೆ. ಹಬ್ಬದ ದಿನದಂದು ಕುಟುಂಬದ ಸದಸ್ಯರನ್ನು ಆಹ್ವಾನಿಸಿ ಸತ್ಕರಿಸುವುದು ಹಿಂದೂ ಧರ್ಮದ ಸಂಸ್ಕೃತಿ. ಹೀಗಾಗಿ ಅವರಿಗೆ ರಾಖಿ ಕಟ್ಟುವ ಮೂಲಕ ಹಬ್ಬ ಆಚರಿಸಲಾಗಿದೆ’ ಎಂದು ಹೇಳಿದರು.

ಮೇಯರ್‌ ರಾಮಪ್ಪ ಬಡಿಗೇರ ಮಾತನಾಡಿ, ‘ಪೌರಕಾರ್ಮಿಕರಿಗೆ ರಾಖಿ ಕಟ್ಟಿ ಯಾರೂ ರಕ್ಷಾಬಂಧನ ಆಚರಿಸಿರಲಿಲ್ಲ.  ಸೇವಾಭಾರತಿ ಟ್ರಸ್ಟ್‌ನವರು ಪೌರಕಾರ್ಮಿಕರ ಸೇವೆ ಗುರುತಿಸಿ, ಅವರ ಜತೆ ಹಬ್ಬ ಆಚರಿಸಿರುವುದು ಶ್ಲಾಘನೀಯ’ ಎಂದರು.

ಉಪ ಮೇಯರ್ ದುರ್ಗಮ್ಮ ಬಿಜವಾಡ, ಮಂಜುಳಾ ಕೃಷ್ಣನ್, ಸೇವಾ ಭಾರತಿ ಅಧ್ಯಕ್ಷ ಬಾಬುರಾವ್, ಭಾರತಿ ನಂದಕುಮಾರ, ಶಂಕರ್ ಗುಮಾಸ್ತೆ, ಗಂಗಮ್ಮ ಗುಂಡಾಳ, ರತ್ನಾ ಪವಾಡಶೆಟ್ಟರ್, ಮಹೇಂದ್ರ ಕೌತಾಳ ಇದ್ದರು. ಸೇವಾಭಾರತಿ ಮಕ್ಕಳು ಪ್ರಾರ್ಥಿಸಿದರು. ವೀಣಾ ಮಳಿಯೆ ಸ್ವಾಗತಿಸಿದರು. ಹರ್ಷಿತಾ ಅಡವಿ ನಿರೂಪಿಸಿದರು. ಭಾರತಿ ನಂದಕುಮಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT