ಗುರುವಾರ , ಮೇ 19, 2022
21 °C

ರಂಗಕಲಾವಿದೆ ಲಕ್ಷ್ಮೀಬಾಯಿ ಏಣಗಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ರಂಗ ಕಲಾವಿದೆ ಲಕ್ಷ್ಮೀಬಾಯಿ ಬಾಳಪ್ಪ ಏಣಗಿ (96) ಬುಧವಾರ ನಿಧನರಾದರು.

ದಿ.ಏಣಗಿ ಬಾಳಪ್ಪ ಅವರ ಪತ್ನಿ ಹಾಗೂ ದಿ.ನಟರಾಜ ಏಣಗಿ ಅವರ ತಾಯಿಯಾದ ಲಕ್ಷ್ಮೀಬಾಯಿ ಅವರಿಗೆ ಪುತ್ರಿ ಇದ್ದಾರೆ. 

ಏಣಗಿ ಬಾಳಪ್ಪ ಅವರು ಅಭಿನಯದ ನಾಟಕಗಳಲ್ಲಿ ಪ್ರಮುಖ ನಟಿಯಾಗಿ ಲಕ್ಷ್ಮೀಬಾಯಿ ಅವರು ಅಭಿನಯಿಸುತ್ತಿದ್ದರು. ಲಕ್ಷ್ಮೀಬಾಯಿ ಅವರು ಅಭಿನಯಿಸಲು ಆರಂಭಿಸಿದ ನಂತರ ಬಾಳಪ್ಪನವರು ಸ್ತ್ರೀಪಾತ್ರಗಳಿಗೆ ಬಣ್ಣ ಹಚ್ಚುವುದನ್ನು ನಿಲ್ಲಿಸಿದ್ದರು.

ಕಂಪನಿಯ ಮಾಲಕಿಯಾಗಿಯೂ ರಂಗಭೂಮಿಯನ್ನು ಮುನ್ನಡೆಸಿದ್ದರು. ಕಿತ್ತೂರು ಚನ್ನಮ್ಮ, ದ್ರೌಪದಿ, ಸೀತೆ, ತಾರಾಮತಿ, ಸಕ್ಕೂಬಾಯಿ, ನೀಲಾಂಬಿಕೆ ಸೇರಿದಂತೆ ಅನೇಕ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಪ್ರಸಿದ್ಧಿ ಪಡೆದಿದ್ದರು. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲೂ ನಟಿಸಿದ್ದರು.

ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.  ಅಂತ್ಯಕ್ರಿಯೆ ನಗರದ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನೆರವೇರಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು