ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಸ್ಪರ್ಧೆಯಿಂದ ಹಿಂದೆ ಸರಿದ ರವಿ ಪಟ್ಟಣಶೆಟ್ಟಿ; ಜೋಶಿಗೆ ಬೆಂಬಲ

Published 22 ಏಪ್ರಿಲ್ 2024, 16:04 IST
Last Updated 22 ಏಪ್ರಿಲ್ 2024, 16:04 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಧಾರವಾಡ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ವೀರೋಂಕೆ ವೀರ್ ಇಂಡಿಯನ್ ಪಕ್ಷದ ರವಿ ವೀರಪ್ಪ ಪಟ್ಟಣಶೆಟ್ಟಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರಿಗೆ ಬೆಂಬಲ ಸೂಚಿಸಿದ್ದಾರೆ.

 ‘ನೇಹಾ ಹಿರೇಮಠ ಅವರ ಕೊಲೆಯಿಂದ ಮಹಿಳಾ ಸಮಾಜ ಭಯದ ವಾತಾವಣರಣದಲ್ಲಿದ್ದು, ರಾಷ್ಟ್ರ ವಿರೋಧಿ ಚಟುವಟಿಕೆಗಳ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಈಗಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಧಾರವಾಡದಲ್ಲಿ ಪ್ರಲ್ಹಾದ ಜೋಶಿ ಅವರಿಂದ ಮಾತ್ರ ಸಾಧ್ಯ’ ಎಂದರು.

 ‘ಮಾಜಿ ಸೈನಿಕರ ಅನೇಕ ಬೇಡಿಕೆಗಳನ್ನು ನರೇಂದ್ರ ಮೋದಿ ಈಡೇರಿಸುವ ಭರವಸೆ ಇದೆ. ಹು-ಧಾ ಷಟ್ಪತ ಹೆದ್ದಾರಿ, ಅಣ್ಣಿಗೇರಿ ಕ್ರೀಡಾಂಗಣ, ಗುಡಗೇರಿ ಬ್ರಿಡ್ಜ್, ಹುಬ್ಬಳ್ಳಿ ರೈಲ್ವೆ ಬ್ರಿಡ್ಜ್, ಕುಂದಗೋಳ ತಾಲ್ಲೂಕಿನ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಜೋಶಿ ಮತ್ತೊಮ್ಮೆ ಆಯ್ಕೆ ಆಗಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT