ಧಾರವಾಡ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಧನರಾಜ್ ಅವರನ್ನು ಪೋಲೀಸರು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಕರೆ ತಂದರು.
ಮಧ್ಯಾಹ್ನ 12.45ಕ್ಕೆ ಜೈಲಿಗೆ ಕರೆ ತರಲಾಯಿತು. ಜೈಲು ದ್ವಾರದ ಕ್ಯಾಬಿನ್‌ನಲ್ಲಿ ಸಿಬ್ಬಂದಿ ಆರೋಪಿಯ ಬ್ಯಾಗುಗಳನ್ನು ತಪಾಸಣೆ ಮಾಡಿದರು.
ನಂತರ ಆರೋಪಿಯನ್ನು ಜೈಲಿನೊಳಗೆ ಕರೆದೊಯ್ದರು.