ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಗುಂದ: ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ: ಮನವಿ

Last Updated 8 ಮಾರ್ಚ್ 2023, 4:53 IST
ಅಕ್ಷರ ಗಾತ್ರ

ನವಲಗುಂದ: ಹಡಪದ ಅಪ್ಪಣ್ಣ ಸಮುದಾಯ ಭವನ ನಿರ್ಮಾಣ ಮಾಡಲು ₹1 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನವಲಗುಂದ ತಾಲ್ಲೂಕು ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

‘2004ರಲ್ಲಿ ನಮ್ಮ ಸಂಘ ಸ್ಥಾಪನೆಗೊಂಡು ಪ್ರತಿ ವರ್ಷ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ನವಲಗುಂದ ನಗರದಲ್ಲಿ ನಮ್ಮ ಸಮಾಜಕ್ಕೆ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಕೆ.ಎನ್. ಗಡ್ಡಿ 2 ಗುಂಟೆ ಜಾಗ ದಾನ ನೀಡಿದ್ದಾರೆ’ ಎಂದರು.

ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ಹಡಪದ, ಪದಾಧಿಕಾರಿಗಳಾದ ಈರಣ್ಣ ಚಿಕ್ಕಬೆಳ್ಳಿಗಟ್ಟಿ, ಪಕ್ಕಿರೇಶ ಹಡಪದ, ಈರಣ್ಣ ಹಡಪದ, ಮಲಿಕಾರ್ಜುನ ಹಡಪದ, ಸಂಗಮೇಶ ಭೂದಿಹಾಳ, ದ್ಯಾಮಣ್ಣ ಹಡಪದ, ಬಸವರಾಜ ಹಡಪದ, ಪಕ್ಕೀರಪ್ಪ ಹಡಪದ, ತಿಪ್ಪಣ್ಣ ಹಡಪದ, ಉಮೇಶ ಹಡಪದ, ಸದು ಹಡಪದ, ಶಂಕರಪ್ಪ ಹಡಪದ, ಅರ್ಜುನ ಹಡಪದ, ಕರಬಸಪ್ಪ ಹಡಪದ, ಸುರೇಶ ಹಡಪದ, ಕಲ್ಲಪ್ಪ ಹಡಪದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT