ಹುಬ್ಬಳ್ಳಿ: ಮುಂಬೈನ ಕೋಲಾಬಾ ಪೊಲೀಸ್ ಸ್ಟೇಷನ್ ಅಧಿಕಾರಿ ಹೆಸರಿನಲ್ಲಿ ಬೆದರಿಕೆಯೊಡ್ಡಿ ವಿವಿಧ ಬ್ಯಾಂಕ್ಗಳ ಖಾತೆಗಳಿಂದ ನಿವೃತ್ತ ರೈಲ್ವೆ ನೌಕರನಿಗೆ ₹6.50 ಲಕ್ಷ ವಂಚಿಸಿರುವ ಪ್ರಕರಣ ನಡೆದಿದೆ.

ನಗರದ ವಿ.ರಾಮಕೃಷ್ಣನ್ ಎಂಬುವರಿಗೆ ವಂಚಿಸಲಾಗಿದೆ.

‘ರಾಮಕೃಷ್ಣನ್ ಅವರ ಮೊಬೈಲ್ಗೆ ಅಪರಿಚಿತನೊಬ್ಬ ಕರೆ ಮಾಡಿ, ‘ಟಿಆರ್ಎಐ’ಯಿಂದ ಕರೆ ಮಾಡುತ್ತಿದ್ದು, ನಿಮ್ಮ ಸಿಮ್ ಕಾನೂನು ಬಾಹಿರ ಚಟುವಟಿಕೆಯಲ್ಲಿ ಬಳಕೆಯಾಗಿದ್ದರಿಂದ 2 ತಾಸಿನಲ್ಲಿ ನಿಷ್ಕ್ರಿಯ ಮಾಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಕಸ್ಟಮರ್ ಕೇರ್ ಸಂಪರ್ಕಿಸಿ ಎಂದು ಹೇಳಿ ಕರೆ ಕಡಿತ ಮಾಡಿದ್ದ.

ನಂತರ ವಿವಿಧ ನಂಬರ್ಗಳಿಂದ ವಿಡಿಯೊ ಕರೆ ಮಾಡಿ, ಮುಂಬೈನ ಕೋಲಾಬಾ ಪೊಲೀಸ್ ಸ್ಟೇಷನ್ ಅಧಿಕಾರಿ ಎಂದು ತಿಳಿಸಿ, ‘ನೀವು ಮನಿ ಲಾಂಡರಿಂಗ್ ಕೇಸ್ನಲ್ಲಿ ಭಾಗಿಯಾಗಿರುತ್ತಿರಿ, ನಿಮ್ಮ ಮೇಲೆ ಅರೆಸ್ಟ್ ವಾರೆಂಟ್ ಇದೆ. ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೇಳಿ ವಿವಿಧ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದು ₹6.50 ಲಕ್ಷ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ’ ಎಂದು ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.