ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ, ಸಹಿ ಸಂಗ್ರಹ ಅಭಿಯಾನ

Published 13 ಜನವರಿ 2024, 4:55 IST
Last Updated 13 ಜನವರಿ 2024, 4:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಗರದ ದುರ್ಗದಬೈಲ್‌ನ ಬ್ರಾಡ್‌ವೇ ಬಳಿಯ ನಂ. 2 ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಸ್ಥಳದಲ್ಲಿ ಮಲ್ಟಿಲೆವಲ್ ಕಾರ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣವಾಗುತ್ತಿದ್ದು, ಯಾವುದೇ ಕಾರಣಕ್ಕೂ ನಾವು ಅವಕಾಶ ನೀಡುವುದಿಲ್ಲ’ ಎಂದು ವಿರೋಧಿಸಿ ಶುಕ್ರವಾರ ನಗರದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

‘ನಮ್ಮ ಶಾಲೆ ಉಳಿಸೋಣ’ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ, ಪಾಲಿಕೆ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಶಾಲೆ ಕಟ್ಟಡ ಕೆಡುವುದು ಬೇಡ ಎಂದು ಆಗ್ರಹಿಸಿದರು.

‘ಶಾಲೆ ಸ್ಥಳಾಂತರ ಕೈಬಿಟ್ಟು ಅದರ ಪ್ರಗತಿಗೆ ಮುಂದಾಗುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಹಾಗೂ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಡಿಡಿಪಿಐ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಅದಕ್ಕೆ ನ್ಯಾಯ ದೊರಕದಿದ್ದರೆ ಅನಿರ್ದಿಷ್ಟ ಧರಣಿ, ಪ್ರತಿಭಟನೆ ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆದಿದೆ’ ಎಂದು ಚಿಕ್ಕವೀರಮಠ ಹೇಳಿದರು.

ಸಹಿ ಸಂಗ್ರಹ ಅಭಿಯಾನದಲ್ಲಿ 500ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಸಹಿ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಶಾಲೆ ಆವರಣದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಹೆಸರಲ್ಲಿ ಬ್ಯಾನರ್ ಅಳವಡಿಸಿದ್ದು, ಸಹಿಗಳಿಂದ ಭರ್ತಿಯಾಗಿದೆ.

ಪಂಚಾಕ್ಷರಿ ಕಟ್ಟಿಮನಿ, ರೂಪೇಶ ಕ್ಷೀರಸಾಗರ, ಇಮ್ತಿಯಾಜ್ ನಾಯಿಕರ, ಪ್ರಶಾಂತ ಸುಣಗಾರ, ಸಿ.ಬಿ. ಮರೀಗೌಡ್ರ, ಸಾಯಿನಾಥ, ಮಂಜುನಾಥ ಮಣಿಪಾಲ, ಮಹೇಂದ್ರ ಚವ್ಹಾಣ, ಸುನಿಲ ಆಶ್ವಲೇಕಾರ, ಶಂಕರ ಪ್ರಕಾಶ, ಗಿರೀಶ ಮದ್ರಾಸ, ಸಂಜಯ ಶಿಂಧೆ, ರವಿ ಮಾನೆ, ಕಿಶೋರ ಉತ್ತರಕರ, ರಾಜು ಯಡ್ರಾವಿ, ಗಣಪತಿ ಗಾಳಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT