ಮಂಗಳವಾರ, ಅಕ್ಟೋಬರ್ 19, 2021
23 °C
16 ವರ್ಷದ ಒಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿ

ಸೆಮಿಫೈನಲ್‌ಗೆ ಎಸ್‌ಡಿಎಂ, ಬಿಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅಲ್ಪ ಮೊತ್ತದ ಗುರಿಯನ್ನು ಸುಲಭವಾಗಿ ಮುಟ್ಟಿದ ಧಾರವಾಡದ ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿ ತಂಡ, ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ಆಯೋಜಿಸಿರುವ 16 ವರ್ಷದ ಒಳಗಿನವರ ಅಂತರ ಕ್ಲಬ್‌ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಬಿಡಿಕೆ ಕೂಡ ನಾಲ್ಕರ ಘಟ್ಟ ತಲುಪಿದೆ.

ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿಯ ಚಾಂಪಿಯನ್ಸ್‌ ನೆಟ್‌ ತಂಡ 20.2 ಓವರ್‌ಗಳಲ್ಲಿ 48 ರನ್‌ ಗಳಿಸಲಷ್ಟೇ ಶಕ್ತವಾಯಿತು. ಎಸ್‌ಡಿಎಂ ತಂಡದ ಪ್ರಭು ಕಲ್ಲೊಳ್ಳಿ (6–2–8–5) ಹಾಗೂ ಆಯನ್‌ ತ್ರಿಪಾಠಿ (ಎರಡು) ಚುರುಕಿನ ಬೌಲಿಂಗ್‌ ಮಾಡಿದರು. ಪ್ರಭು ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು. ಈ ಗುರಿಯನ್ನು ಎಸ್‌ಡಿಎಂ 6.5 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ದಿನದ ಇನ್ನೊಂದು ಪಂದ್ಯದಲ್ಲಿ ಧಾರವಾಡದ ಫಸ್ಟ್‌ ಕ್ರಿಕೆಟ್‌ ಅಕಾಡೆಮಿ ವಿರುದ್ಧ ಬಿಡಿಕೆ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಮೊದಲು ಬ್ಯಾಟ್‌ ಮಾಡಿದ ಫಸ್ಟ್‌ ತಂಡ 23.2 ಓವರ್‌ಗಳಲ್ಲಿ 80 ರನ್‌ ಗಳಿಸಿತು. ಬಿಡಿಕೆ ತಂಡದ ಬಸವರಾಜ ಕೆ. (4–0–16–3) ಪಂದ್ಯ ಶ್ರೇಷ್ಠ ಗೌರವ ಸಾಧಿಸಿದರು. ಈ ಗುರಿಯನ್ನು ಬಿಡಿಕೆ ತಂಡ 11 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ತಲುಪಿತು.

ಗುರುವಾರ ನಡೆಯಲಿರುವ ಸೆಮಿಫೈನಲ್‌ ಪಂದ್ಯಗಳಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌–ಎಸ್‌ಡಿಎಂ (ಬೆಳಿಗ್ಗೆ 8.30ಕ್ಕೆ) ಮತ್ತು ಹುಬ್ಬಳ್ಳಿಯ ತೇಜಲ್‌ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ–ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಮ. 1.20) ಪೈಪೋಟಿ ನಡೆಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು