ಮಂಗಳವಾರ, ಜುಲೈ 27, 2021
24 °C

ಸ್ವಉದ್ಯೋಗದಿಂದ ಸ್ವಾವಲಂಬನೆ: ಅಬ್ಬಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಅಲ್ಪಸಂಖ್ಯಾತ ಸಮುದಾಯದ ಜನರು ಸರ್ಕಾರದ ಸಾಲ ಸೌಲಭ್ಯಗಳ ಪ್ರಯೋಜನ ಪಡೆದು, ಪ್ರಗತಿ ಸಾಧಿಸಬೇಕು. ಸ್ವಉದ್ಯೋಗದಿಂದ ಆರ್ಥಿಕ ಸ್ವಾವಲಂಬಿಗಳಾಗಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಅವರ ಭವಿಷ್ಯ ರೂಪಿಸಬೇಕು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಸಲಹೆ ನೀಡಿದರು.

ನಗರದ ಗಣೇಶಪೇಟೆಯಲ್ಲಿ ಗುರುವಾರ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ‘ಮೈಕ್ರೊ ಸಾಲ’ ಯೋಜನೆಯಡಿ, ಸ್ವಉದ್ಯೋಗಕ್ಕಾಗಿ ಮಂಜೂರಾದ ತಲಾ ₹10 ಸಾವಿರ ಕಿರುಸಾಲ ಸೌಲಭ್ಯದ ತಿಳಿವಳಿಕೆ ಪತ್ರವನ್ನು 84 ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಸ್ಥಳೀಯ ಮುಖಂಡ ಇಲಿಯಾಸ್ ಮನಿಯಾರ್ ಮಾತನಾಡಿ, ‘ಶಾಸಕ ಪ್ರಸಾದ ಅಬ್ಬಯ್ಯ ಅವರಿಂದಾಗಿ ಪೂರ್ವ ಕ್ಷೇತ್ರ ಅಭಿವೃದ್ಧಿಗೊಂಡಿದೆ. ಅವರ ಕಾರ್ಯವೈಖರಿ ನಮಗೆಲ್ಲ ಪ್ರೇರಣೆಯಾಗಿದೆ’ ಎಂದರು.

ಮುಖಂಡರಾದ ವಿಜನಗೌಡ ಪಾಟೀಲ, ಮುತುವಲ್ಲಿ ವಜೀರ್ ಅಹ್ಮದ್ ಕುಮಟಾಕರ್, ಮುಖಂಡರಾದ ಶಫಿ ಮುದ್ದೇಬಿಹಾಳ, ಬಾಬಾಜಾನ್ ಮುಧೋಳ, ರಶೀದ ಬೋಲಾಬಾಯಿ, ಇಕ್ಬಾಲ್ ಚಿತ್ತೇವಾಲೆ, ಇನಾಯತ್ ಖಾನ್ ಪಠಾಣ್, ಕುಮಾರ ಕುಂದನಹಳ್ಳಿ, ನಿಸಾರ್ ಅಹ್ಮದ್ ನೀಲಗಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು