ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ. 1ರಂದು ಸಿದ್ಧರಾಮಶ್ರೀ ತುಲಾಭಾರ

ಹುಬ್ಬಳ್ಳಿಯಲ್ಲಿ ಪೂರ್ವಭಾವಿ ಸಭೆ: ಶ್ರೀಗಳ 75ನೇ ಜನ್ಮದಿನ ಅದ್ಧೂರಿ ಆಚರಣೆಗೆ ನಿರ್ಧಾರ
Published 22 ಡಿಸೆಂಬರ್ 2023, 4:20 IST
Last Updated 22 ಡಿಸೆಂಬರ್ 2023, 4:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿ ಅವರ 75ನೇ ಜನ್ಮದಿನವನ್ನು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಆಚರಿಸುವ ಕುರಿತು ನಗರದಲ್ಲಿ ಗುರುವಾರ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ‘ಜನವರಿ 10 ರಿಂದ 31ರವರೆಗೆ ಭಾವೈಕ್ಯತಾ ರಥಯಾತ್ರೆ ಮತ್ತು ಪ್ರವಚನ ಕಾರ್ಯಕ್ರಮ ನಡೆಸಿ, ಫೆಬ್ರುವರಿ 1ರಂದು ನೆಹರೂ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ. ರಥಯಾತ್ರೆಯಲ್ಲಿ ಆನೆ, ಅಂಬಾರಿ ಮೆರವಣಿಗೆ ನಡೆಯಲಿದೆ. ಪ್ರತಿದಿನ ಒಂದು ಓಣಿಯಲ್ಲಿ ಮೆರವಣಿಗೆ ನಡೆಸಿ, ಸಂಜೆ ಪ್ರವಚನ ನೀಡಲಾಗುವುದು’ ಎಂದರು.

‘ಫೆ.1ರಂದು ಮಧ್ಯಾಹ್ನ 3.30ಕ್ಕೆ ಮೂರುಸಾವಿರ ಮಠದಿಂದ ಭಾವೈಕ್ಯತಾ ರಥಯಾತ್ರೆ ಹಾಗೂ ಮೆರವಣಿಗೆ, ಚನ್ನಮ್ಮ ವೃತ್ತದ ಮಾರ್ಗವಾಗಿ ನೆಹರೂ ಮೈದಾನ
ದವರೆಗೆ ಸಾಗಲಿದೆ. ಮೆರವಣಿಗೆಯಲ್ಲಿ ರಾಜ್ಯದ ಪ್ರಸಿದ್ಧ 10 ಕಲಾತಂಡಗಳು ಭಾಗವಹಿಸಲಿವೆ’ ಎಂದರು.

‘₹40 ಲಕ್ಷ ಖರ್ಚು ಮಾಡಿ ಭಾವೈಕ್ಯತಾ ರಥ ವಿನ್ಯಾಸಗೊಳಿ
ಸಲಾಗುವುದು. ಫಕೀರ ಸಿದ್ಧರಾಮ ಸ್ವಾಮೀಜಿ ಅವರಿಗೆ ಮತ್ತು ಆನೆಗೆ ನಾಣ್ಯಗಳಿಂದ ತುಲಾಭಾರ ನಡೆಯಲಿದೆ. ಐದೂವರೆ ಟನ್‌ನಷ್ಟು ಅಂದರೆ ₹48 ಲಕ್ಷ ಮೊತ್ತದ ನಾಣ್ಯಗಳು ತುಲಾಭಾರಕ್ಕೆ ಬಳಕೆ
ಯಾಗಲಿದ್ದು, ಭಕ್ತರ ಮೂಲಕವೇ ಸಂಗ್ರಹಿಸಲಾಗುವುದು.

ಆನೆಯ ತುಲಾಭಾರಕ್ಕೆ 40 ಅಡಿ ಅಗಲ, 20 ಅಡಿ ಎತ್ತರದ ₹20 ಲಕ್ಷ ವೆಚ್ಚದ ತಕ್ಕಡಿ ನಿರ್ಮಿಸಲಾಗುವುದು.

ರಾಜ್ಯಪಾಲ ಥಾವರ್‌ಚಂದ್ಗೆ ಹಲೋತ್, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಶರಣಪ್ಪ ಕೊಟಗಿ, ಶಿವಕುಮಾರ ಹಿರೇಮಠ, ಸಿದ್ದರಾಮಯ್ಯ ಹಿರೇಮಠ, ಎನ್.ಎಚ್. ಚರಂತಿಮಠ,  ರಾಜಶೇಖರ ಮೆಣಸಿನಕಾಯಿ, ರಜತ್ ಉಳ್ಳಾಗಡ್ಡಿಮಠ, ವಿಎಸ್‌ವಿ ಪ್ರಸಾದ್, ಮಹೇಂದ್ರ ಸಿಂಘಿ ಅವರು ಸಲಹೆ–ಸೂಚನೆ ನೀಡಿದರು.

ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಎರಡೆತ್ತಿನ ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ, ಬೊಮ್ಮನಹಳ್ಳಿ ಶಿವಯೋಗಿ ಸ್ವಾಮೀಜಿ, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ರಾಯನಾಳದ ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ, ನವನಗರದ ರಾಜಶೇಖರ ಶಿವಾಚಾರ್ಯರು,  ಮಸಬಿನಾಳ  ವಿರಕ್ತಮಠದ ಸಿದ್ಧರಾಮ ಸ್ವಾಮೀಜಿ ಸೇರಿದಂತೆ ಅನೇಕರು
ಪಾಲ್ಗೊಂಡಿದ್ದರು.

‘ಸ್ವರ್ಣ ತುಲಾಭಾರ; 75 ಗ್ರಂಥ ಬಿಡುಗಡೆ’ ‘ಫಕೀರ ಸಿದ್ಧರಾಮ ಸ್ವಾಮೀಜಿ ಅವರ 75ನೇ ಜನ್ಮದಿನ ಅಂಗವಾಗಿ ಶಿರಹಟ್ಟಿಯಲ್ಲಿಯೂ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಶ್ರೀಗಳವನ್ನು ಬಂಗಾರದಿಂದ ತುಲಾಭಾರ ಮಾಡಲಾಗುವುದು. ಭಕ್ತರು ಸ್ವ–ಇಚ್ಛೆಯಿಂದ ಬಂಗಾರ ಹಾಗೂ ಹಣ ದೇಣಿಗೆ ನೀಡುತ್ತಿದ್ದಾರೆ. ಕಾರ್ಯಕ್ರಮದ ಅಂಗವಾಗಿ 75 ದಿನಗಳವರೆಗೆ ಪ್ರವಚನ 75 ಗ್ರಂಥ ಬಿಡುಗಡೆ ವಿವಿಧ ಕ್ಷೇತ್ರಗಳ 75 ಸಾಧಕರಿಗೆ ಸನ್ಮಾನ ಮಾಡಲಾಗುವುದು. ಫಕೀರ ಸಿದ್ಧರಾಮ ಸ್ವಾಮೀಜಿ ಇಚ್ಛೆಯಂತೆ ತುಲಾಭಾರಕ್ಕೆ ಬಳಸಿದ ಬಂಗಾರವನ್ನು ಬಡಮಕ್ಕಳ ಶಿಕ್ಷಣಕ್ಕೆ ವಿನಿಯೋಗ ಮಾಡಲಾಗುವುದು’ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT