ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಸಾಖಿ ದಿನ: ಸಿಖ್ ಭಜನೆ, ಕೀರ್ತನೆ

Last Updated 15 ಏಪ್ರಿಲ್ 2022, 13:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೈಸಾಖಿ ದಿನದ ಅಂಗವಾಗಿ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಗುರುದ್ವಾರದಲ್ಲಿ ಧರ್ಮ ಗ್ರಂಥ ‘ಗುರು ಗ್ರಂಥ ಸಾಹಿಬ್‌’ಗೆ ಗುರುವಾರ ವಿಶೇಷ ಪೂಜೆ ಸಲ್ಲಿಸಿದರು. ಸುರಿಂದರ್ ಸಿಂಗ್ ಗಿಲ್ ಮತ್ತು ಗ್ಯಾನಿ ಮೇಜರ್ ಸಿಂಗ್ ಅವರ ತಂಡ ಕೀರ್ತನೆಗಳನ್ನು ಪ್ರಸ್ತುತಪಡಿಸಿತು.

‘ಸಿಖ್ ಧರ್ಮದ ಹತ್ತನೇ ಧರ್ಮಗುರು ಗುರು ಗೋವಿಂದ ಸಿಂಗ್ ಅವರು, ಪ್ರತಿ ಮನೆಯಲ್ಲೂ ಒಬ್ಬ ಸಿಖ್ ಆಗಬೇಕು ಎಂಬ ಆಶಯದಿಂದ ಧರ್ಮರಕ್ಷಣೆಗಾಗಿ 1699ರಲ್ಲಿ ಖಾಲ್ಸಾ ದೀಕ್ಷೆ ನೀಡಿದರು. ಅಂದಿನಿಂದ ಬೈಸಾಖಿ ದಿನ ಆಚರಿಸಿಕೊಂಡು ಬರಲಾಗುತ್ತದೆ. ಪಂಜಾಬ್‌ನಲ್ಲಿ ಈ ದಿನ ಉಳುಮೆ ಅಥವಾ ಬಿತ್ತನೆ ಕೆಲಸವನ್ನು ಸಾಂಕೇತಿಕವಾಗಿ ಆರಂಭಿಸಲಾಗುತ್ತದೆ’ ಎಂದು ಹುಬ್ಬಳ್ಳಿಯ ಗುರುನಾನಕ್ ಮಿಷನ್ ಟ್ರಸ್ಟ್ ಕಾರ್ಯದರ್ಶಿ ಜಸ್ವೀರ್ ಸಿಂಗ್ ಹೇಳಿದರು. ಟ್ರಸ್ಟ್ ಅಧ್ಯಕ್ಷ ಜಸ್ಮೇಲ್ ಸಿಂಗ್, ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT