ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿತಾರ್‌ ನವಾಜ್‌ ಉಸ್ತಾದ್‌ ಬಾಲೆಖಾನ್‌ ಪ್ರಶಸ್ತಿಗೆ ಮೂವರು ಆಯ್ಕೆ

Published 29 ನವೆಂಬರ್ 2023, 11:20 IST
Last Updated 29 ನವೆಂಬರ್ 2023, 11:20 IST
ಅಕ್ಷರ ಗಾತ್ರ

ಧಾರವಾಡ: ಬೆಂಗಳೂರಿನ ಸಿತಾರ್‌ ನವಾಜ್‌ ಉಸ್ತಾದ್‌ ಬಾಲೆಖಾನ್‌ ಸ್ಮಾರಕ ಪ್ರತಿಷ್ಠಾನ ಟ್ರಸ್ಟ್‌ ಮತ್ತು ಇನ್ಫೋಸಿಸ್‌ ಸಹಯೋಗದಲ್ಲಿ ನೀಡುವ ಸಿತಾರ್‌ ನವಾಜ್‌ ಉಸ್ತಾದ್‌ ಬಾಲೆಖಾನ್‌ ಪ್ರಶಸ್ತಿಗೆ ಧಾರವಾಡದ ಪೀಟಿಲು ವಾದಕರಾದ ಬಿ.ಎಸ್‌.ಮಠ ಮತ್ತು ಅಕ್ಕಮಹಾದೇವಿ ಹಿರೇಮಠ ಆಯ್ಕೆಯಾಗಿದ್ದಾರೆ. ಪುರಸ್ಕಾರವು ₹1 ಲಕ್ಷ ನಗದು, ಫಲಕ ಒಳಗೊಂಡಿದೆ.

ಸಿತಾರ್‌ ನವಾಜ್‌ ಉಸ್ತಾದ್‌ ಬಾಲೆಖಾನ್‌ ಸ್ಮಾರಕ ಪ್ರತಿಷ್ಠಾನ ಟ್ರಸ್ಟ್‌ ವತಿಯಿಂದ ಸಹ ಕಲಾವಿದರಿಗೆ ನೀಡುವ ಉಸ್ತಾದ್‌ ಬಾಲೆಖಾನ್‌ ಪ್ರಶಸ್ತಿಗೆ ಮುಂಬೈನ ತಬಲ ವಾದಕ ಓಂಕಾರ ಗುಲ್ವಾಡಿ ಆಯ್ಕೆಯಾಗಿದ್ದಾರೆ. ಈ ಪುರಸ್ಕಾರವು ₹ 25 ಸಾವಿರ ನಗದು, ಫಲಕ ಒಳಗೊಂಡಿದೆ.

ಧಾರವಾಡದಲ್ಲಿ ಡಿಸೆಂಬರ್‌ 2ರಂದು ಆಲೂರು ವೆಂಕಟರಾವ್‌ ಭವನದಲ್ಲಿ ನಡೆಯಲಿರುವ ಸ್ಮರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್‌ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT