ಬುಧವಾರ, ಆಗಸ್ಟ್ 10, 2022
20 °C

ಪ್ರಯಾಣಿಕ ರೈಲುಗಳ ಸೇವೆ ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಈ ಕೆಳಗಿನ ವಿಶೇಷ ರೈಲುಗಳ ಸೇವೆಯನ್ನು ನಿಗದಿತ ದಿನಾಂಕದವರೆಗೆ ಮುಂದುವರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಾಸ್ಕೊ ಡಾ ಗಾಮಾ– ಪಟ್ನಾ (02741– ಪ್ರತಿ ಬುಧವಾರ) ನಡುವೆ ಸಂಚರಿಸುವ ಸೂಫರ್ ಫಾಸ್ಟ್‌ ರೈಲು ಜೂನ್ 30ರವರೆಗೆ, ಪಟ್ನಾ– ವಾಸ್ಕೊ ಡಾ ಗಾಮಾ (02742– ಪ್ರತಿ ಶನಿವಾರ) ರೈಲು ಜುಲೈ 3ರವರೆಗೆ, ಹುಬ್ಬಳ್ಳಿ– ಹೈದರಾಬಾದ್ ಎಕ್ಸ್‌ಪ್ರೆಸ್ (07319– ನಿತ್ಯ) ಜೂನ್ 30ರವರೆಗೆ, ಹೈದರಾಬಾದ್– ಹುಬ್ಬಳ್ಳಿ ಎಕ್ಸ್‌ಪ್ರೆಸ್ (07320– ನಿತ್ಯ) ಜುಲೈ 1ರವರೆಗೆ, ಹುಬ್ಬಳ್ಳಿ–ವಾರಾಣಸಿ ಎಕ್ಸ್‌ಪ್ರೆಸ್ (07323– ಪ್ರತಿ ಶುಕ್ರವಾರ) ಜೂನ್ 25ರವರೆಗೆ, ವಾರಾಣಸಿ– ಹುಬ್ಬಳ್ಳಿ ಎಕ್ಸ್‌ಪ್ರೆಸ್ (07323– ಪ್ರತಿ ಭಾನುವಾರ) ಜೂನ್ 27ರವರೆಗೆ.

ಹುಬ್ಬಳ್ಳಿ– ದಾದರ್ ಎಕ್ಸ್‌ಪ್ರೆಸ್ (07317– ನಿತ್ಯ) ಜೂನ್ 30ರವರೆಗೆ, ದಾದರ್– ಹುಬ್ಬಳ್ಳಿ ಎಕ್ಸ್‌ಪ್ರೆಸ್ (07318– ನಿತ್ಯ) ಜುಲೈ 1ರವರೆಗೆ, ಮೀರಜ್– ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (06590– ನಿತ್ಯ) ಜುಲೈ 1ರವರೆಗೆ, ಧಾರವಾಡ– ಮೈಸೂರು ಹಬ್ಬದ ವಿಶೇಷ ಎಕ್ಸ್‌ಪ್ರೆಸ್ (07302– ನಿತ್ಯ) ಜೂನ್ 30ರವರೆಗೆ, ಮೈಸೂರು– ಧಾರವಾಡ ಹಬ್ಬದ ವಿಶೇಷ ಎಕ್ಸ್‌ಪ್ರೆಸ್ (07301– ನಿತ್ಯ) ಜುಲೈ 1ರವರೆಗೆ, ಹುಬ್ಬಳ್ಳಿ– ಬಳ್ಳಾರಿ ಪ್ಯಾಸೆಂಜರ್ (07337– ನಿತ್ಯ) ಜೂನ್ 30ರವರೆಗೆ, ಬಳ್ಳಾರಿ– ಹುಬ್ಬಳ್ಳಿ ಪ್ಯಾಸೆಂಜರ್ (07338– ನಿತ್ಯ) ಜೂನ್ 30ರವರೆಗೆ.

ಧಾರವಾಡ– ಸೊಲ್ಲಾಪುರ ಪ್ಯಾಸೆಂಜರ್ (07322– ನಿತ್ಯ) ಜೂನ್ 30ರವರೆಗೆ, ಸೊಲ್ಲಾಪುರ– ಧಾರವಾಡ ಪ್ಯಾಸೆಂಜರ್ (07321– ನಿತ್ಯ) ಜುಲೈ 1ರವರೆಗೆ, ಹುಬ್ಬಳ್ಳಿ– ಸೊಲ್ಲಾಪುರ ಪ್ಯಾಸೆಂಜರ್ (07332– ನಿತ್ಯ) ಜೂನ್ 30ರವರೆಗೆ, ಸೊಲ್ಲಾಪುರ –ಹುಬ್ಬಳ್ಳಿ ಪ್ಯಾಸೆಂಜರ್ (07331– ನಿತ್ಯ) ಜುಲೈ 1ರವರೆಗೆ, ಮೈಸೂರು– ಅಜ್ಮೇರ್ ರೈಲು (06210– ಮಂಗಳವಾರ, ಗುರುವಾರ) ಜೂನ್ 29ರವರೆಗೆ, ಅಜ್ಮೇರ್– ಮೈಸೂರು ರೈಲು (06209– ಶುಕ್ರವಾರ, ಭಾನುವಾರ) ಜುಲೈ 2ರವರೆಗೆ.

ಬೆಂಗಳೂರು– ಅಜ್ಮೇರ್ ಹಬ್ಬದ ವಿಶೇಷ ಎಕ್ಸ್‌ಪ್ರೆಸ್ (06205– ಪ್ರತಿ ಶುಕ್ರವಾರ) ಜೂನ್ 25ರವರೆಗೆ, ಅಜ್ಮೇರ್– ಬೆಂಗಳೂರು ಹಬ್ಬದ ವಿಶೇಷ ಎಕ್ಸ್‌ಪ್ರೆಸ್ (06206– ಪ್ರತಿ ಸೋಮವಾರ) ಜೂನ್ 28ರವರೆಗೆ, ಬೆಂಗಳೂರು– ಜೋಧಪುರ ಹಬ್ಬದ ವಿಶೇಷ ಎಕ್‌ಪ್ರೆಸ್ (06534– ಪ್ರತಿ ಭಾನುವಾರ) ಜೂನ್ 27ರವರೆಗೆ, ಜೋಧಪುರ– ಬೆಂಗಳೂರು ಹಬ್ಬದ ವಿಶೇಷ ಎಕ್ಸ್‌ಪ್ರೆಸ್ (06533– ಪ್ರತಿ ಬುಧವಾರ) ಜೂನ್ 30ರವರೆಗೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.