ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಂಗಲ್‌ ಅಂಗವಾಗಿ ವಿಶೇಷ ರೈಲು 13ಕ್ಕೆ

Last Updated 9 ಜನವರಿ 2022, 15:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪೊಂಗಲ್‌ ಹಬ್ಬದ ಅಂಗವಾಗಿ ಜ. 13ರಂದು ಬೆಳಗಾವಿ–ಯಶವಂತಪುರ ನಡುವೆ ಎರಡೂ ಮಾರ್ಗದಿಂದ ವಿಶೇಷ ರೈಲು ಸಂಚರಿಸಲಿದೆ.

ಅಂದು ಯಶವಂತಪುರದಿಂದ ರಾತ್ರಿ 9.30ಕ್ಕೆ ಹೊರಟು ಮರುದಿನ ಬೆಳಿಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ. ಅದೇ ದಿನ ಬೆಳಗಾವಿಯಿಂದ 9.20ಕ್ಕೆ ಹೊರಟು ಮರುದಿನ ಬೆಳಿಗ್ಗೆ 8.30ಕ್ಕೆ ಯಶವಂತಪುರ ಮುಟ್ಟಲಿದೆ.

ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಸಂಚಾರ ಪುನರಾರಂಭ 11ರಿಂದ

ಹುಬ್ಬಳ್ಳಿ: ಹುಬ್ಬಳ್ಳಿ–ವಿಜಯಪುರ ನಡುವೆ ನಿತ್ಯ ಸಂಚರಿಸುತ್ತಿದ್ದ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ವಿಶೇಷ ರೈಲಿನ ಸಂಚಾರವನ್ನು ಜ. 11ರಿಂದ ಹುಬ್ಬಳ್ಳಿಯಿಂದ, 12ರಿಂದ ವಿಜಯಪುರದಿಂದ ಪುನರಾರಂಭಿಸಲಾಗುವುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸಂಜೆ 4.45ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 10.10ಕ್ಕೆ ವಿಜಯಪುರ ತಲುಪಲಿದೆ. ಮರುದಿನ ಬೆಳಿಗ್ಗೆ 5.45ಕ್ಕೆ ವಿಜಯಪುರದಿಂದ ಹೊರಟು 11 ಗಂಟೆಗೆ ಇಲ್ಲಿಗೆ ಬರಲಿದೆ. ಮುಂದಿನ ಆದೇಶದ ತನಕ ರೈಲು ಸಂಚರಿಸಲಿದ್ದು, ಗದಗ, ಮಲ್ಲಾಪುರ, ಹೊಳೆ ಆಲೂರು, ಬಾದಾಮಿ, ಗುಳೇದಗುಡ್ಡ ರೋಡ್‌, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ್‌, ಇಬ್ರಾಹಿಂಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT