ಗುರುವಾರ , ಮೇ 19, 2022
21 °C

‘ಶ್ರೀ ಅಲ್ಲಮಪ್ರಭು ಚಿತ್ರ ಮೇ ನಲ್ಲಿ ಬಿಡುಗಡೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಅಲ್ಲಮಪ್ರಭು ಅವರ ಜೀವನ ತತ್ವಾದರ್ಶಗಳನ್ನು ‘ಶ್ರೀ ಅಲ್ಲಮಪ್ರಭು’ ಚಿತ್ರದ ಮೂಲಕ ಜನರಿಗೆ ಪರಿಚಯಿಸಲಾಗುತ್ತಿದ್ದು, ಚಿತ್ರ ಮೇ ತಿಂಗಳಲ್ಲಿ ಬಿಡುಗಡೆ ಆಗಲಿದೆ’ ಎಂದು ಚಿತ್ರದ ನಿರ್ಮಾಪಕ ಮಾಧವಾನಂದ ಶೇಗುಣಸಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರದಲ್ಲಿ ಅಲ್ಲಮಪ್ರಭು ಅವರ ಬಾಲ್ಯದಿಂದ ಯೌವ್ವನದವರೆಗಿನ ಜೀವನ ಚರಿತ್ರೆ ಪರಿಚಯಿಸಲಾಗಿದ್ದು, ವಚನಗಳನ್ನು ಬಳಸಿಕೊಳ್ಳಲಾಗಿದೆ. ಈಗಾಗಲೇ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದ್ದು, ರಾಮನವಮಿಗೆ ಎರಡು ಹಾಗೂ ಅಕ್ಕಮಹಾದೇವಿಯ ಜಯಂತಿಯಂದು ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು. 

‘ಸಿನಿಮಾದ ಚಿತ್ರೀಕರಣವನ್ನು ಬೆಂಗಳೂರು, ಬನವಾಸಿ, ತೆರದಾಳ ಸೇರಿದಂತೆ ರಾಜ್ಯದ ವಿವಿಧೆಡೆ ಮೂರು ಹಂತಗಳಲ್ಲಿ ಮಾಡಿದ್ದೇವೆ. ಸೆನ್ಸಾರ್ ಮಂಡಳಿಯಿಂದ ಯು ಪ್ರಮಾಣ ಪತ್ರ ಸಿಕ್ಕಿದೆ’ ಎಂದರು.
ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ನಿರ್ಮಾಪಕ ಮಹಾವೀರ ಪ್ರಭು, ನಿರ್ದೇಶಕ ಶರಣ ಗದ್ವಾಲ್, ಚಿತ್ರದ ನಾಯಕ ಸಚ್ಚಿನ ಸುವರ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.