ಧಾರವಾಡ: ‘ಶಂಕರಪುರದ ಶೃಂಗೇರಿ ಶಂಕರ ಮಠದಲ್ಲಿ ಮಾರ್ಚ್ 21ರಿಂದ 25ರ ವರೆಗೆ ವಿಜಯಯಾತ್ರೆ ಕಾರ್ಯಕ್ರಮ ಜರುಗಲಿದೆ. ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’ ಎಂದು ಶಾಂಕರ ತತ್ವ ಅಭಿಯಾನದ ಜಿಲ್ಲಾ ಘಟಕದ ಅಧ್ಯಕ್ಷ ರವಿ ದೇಶಪಾಂಡೆ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘21ರಂದು ಸಂಜೆ 5.30ಕ್ಕೆ ವಿಧುಶೇಖರ ಭಾರತೀ ಸ್ವಾಮೀಜಿ ಆಗಮಿಸುವರು. 6.30ಕ್ಕೆ ಆಶೀರ್ವಚನ ನೀಡುವರು’ ಎಂದರು.

‘22ರಂದು ಬೆಳಿಗ್ಗೆ 8.30ಕ್ಕೆ ಶತ ಚಂಡಿ ಹೋಮ ನಡೆಯಲಿದೆ. ಶಾರದಾ ಪೀಠದ ಭಾರತೀ ತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕರಿಸಿ 50 ವರ್ಷ ಸಂದ ನಿಮಿತ್ತ ಸುವರ್ಣ ಭಾರತೀ ಮಹೋತ್ಸವದಡಿ ಬಾಲಭಾರತೀ ಸ್ತೋತ್ರ ಸಮರ್ಪಣೆ ಕಾರ್ಯಕ್ರಮ ಬೆಳಿಗ್ಗೆ 9.30ಕ್ಕೆ ಜರುಗಲಿದೆ. ಶಂಕರಾಚಾರ್ಯರ ಜೀವನ ಕುರಿತ ರೂಪಕ ಸಂಜೆ 5.30ಕ್ಕೆ ನಡೆಯಲಿದೆ‘ ಎಂದು ತಿಳಿಸಿದರು.

‘23ರಂದು ರಾತ್ರಿ 7.30 ಕ್ಕೆ ಸ್ವಾಮೀಜಿ ಆಶೀರ್ವಚನ ನೀಡುವರು. 24ರಂದು ಬೆಳಿಗ್ಗೆ 9 ಗಂಟೆಗೆ ವಿದ್ವಾಂಸರಿಂದ ವೇದಗೋಷ್ಠಿ ನಡೆಯಲಿದೆ. ಮಧ್ಯಾಹ್ನ 4ಕ್ಕೆ ವಾಕ್ಯಾರ್ಥ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ. 25ರಂದು ಬೆಳಿಗ್ಗೆ 9.30ಕ್ಕೆ ತ್ರೀವೇಣಿ ಸ್ತೋತ್ರ ಸಮರ್ಪಣೆ ಜರುಗಲಿದೆ’ ಎಂದರು.

ಶೃಂಗೇರಿ ಶಂಕರಮಠ ವ್ಯವಸ್ಥಾಪಕ ವಿಠ್ಠಲ ನಾರಾಯಣಶೆಟ್ಟಿ, ಪುರುಷೋತ್ತಮ ಕುಲಕರ್ಣಿ, ಶ್ರೀಧರ ಮದ್ಲೂರು, ಮಹೇಶ ಮಳಿಯೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.