ಸೋಮವಾರ, ಡಿಸೆಂಬರ್ 5, 2022
19 °C

ಬೆಂಕಿ ಆಕಸ್ಮಿಕ: ಬಣವೆ ಆಹುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಪ್ಪಿನಬೆಟಗೇರಿ: ಬೆಂಕಿ ತಗುಲಿದ ಪರಿಣಾಮ ಅಪಾರ ಪ್ರಮಾಣದ ಹೊಟ್ಟು, ಮೇವಿನ ಬಣವೆ ಸುಟ್ಟು ಕರಕಲಾದ ಘಟನೆ ಉಪ್ಪಿನಬೆಟಗೇರಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ರೈತ ಶ್ರೀಕಾಂತ ಮಡಿವಾಳರ ವಿರೂಪಾಕ್ಷಪ್ಪ ಯಾವಗಲ್ ಎಂಬುವರು ಊರ ಹೊರವಲಯದ ಹಳೇ ಬಸ್ ನಿಲ್ದಾಣದ ಹತ್ತಿರದ ಹೊಲದಲ್ಲಿನ ಜಾಗದಲ್ಲಿ ಸಂಗ್ರಹಿಸಿದ್ದ 6 ಟ್ರ್ಯಾಕ್ಟರ್ ಉದ್ದು, ಸೋಯಾಬೀನ್‌ ಹೊಟ್ಟು ಹಾಗೂ ಶಿವಪ್ಪ ಹಳಮನಿ ಎಂಬುವವರ ಒಂದು ಟ್ರ್ಯಾಕ್ಟರ್‌ನಷ್ಟು ಜೋಳದ ಮೇವು ಬೆಂಕಿಗಾಹುತಿಯಾಗಿದೆ. ಪಕ್ಕದಲ್ಲೇ ಎತ್ತುಗಳನ್ನು ಕಟ್ಟಿದ್ದರು, ಆದರೆ ಕೂಡಲೇ ಅವುಗಳನ್ನು ಬಿಚ್ಚಿ ಬೇರೆಡೆಗೆ ಸಾಗಿಸಲಾಯಿತು ಎನ್ನಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅಪಾಯ ತಪ್ಪಿಸಿದರು. ಗರಗ ಪೋಲಿಸ್ ಠಾಣೆಯಲ್ಲಿ ಈ ಪ್ರಕರಣ ದಾಖಲು ಮಾಡಿರುವುದಾಗಿ ರೈತ ವಿರೂಪಾಕ್ಷಪ್ಪ ಯಾವಗಲ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.