‘ನೆಲದ ಮೂಲ ಸಂಸ್ಕೃತಿ ಉಳಿಯಲಿ’

ಹುಬ್ಬಳ್ಳಿ: ಹಾಡು, ಕಥೆ, ಒಗಟು, ಸೋಬಾನ, ಉಡುಗೆ ತೊಡುಗೆ ಹಾಗೂ ಆಹಾರ ವಿಹಾರಗಳೆಲ್ಲವನ್ನೂ ಒಳಗೊಂಡ ನಮ್ಮ ನೆಲದ ಮೂಲ ಸಂಸ್ಕೃತಿ ಉಳಿಯಬೇಕು ಎಂದು ನಿವೃತ್ತ ಪ್ರಾಚಾರ್ಯೆ ಉಮಾದೇವಿ ಹಿರೇಮಠ ಕರೆ ನೀಡಿದರು.
ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಜೀವಿ ಕಲಾಬಳಗ ಸಹಯೋಗದಲ್ಲಿ ವಿದ್ಯಾನಗರದ ವಿದ್ಯಾವನ ಬಡಾವಣೆಯ ವೀರಸೋಮೇಶ್ವರ ಜ್ಯೋತಿ ನಿಲಯದ ‘ಸಂಸ್ಕೃತಿ ಅಟ್ಟ’ ಮೂಲಜನಪದ ಹಾಡುಗಾರಿಕೆ ತರಬೇತಿ ಕೇಂದ್ರವನ್ನು ಬೀಸುವ ಕಲ್ಲಿನ ಹಾಡನ್ನು ಹಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
‘ಜಾಗತೀಕರಣ ಹಾಗೂ ಉದಾರೀಕರಣದ ಪರಿಣಾಮದಿಂದ ನಮ್ಮ ಮೂಲ ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದೇವೆ. ಹೀಗಾದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ’ ಎಂದರು.
ಚರ್ಮವಾದ್ಯ ಬಾರಿಸುವ ಮೂಲಕ ಡಾ. ಸಿ.ಆರ್. ಹಿರೇಮಠ ಅವರು ಈ ಕೇಂದ್ರ ಉತ್ತಮ ಮೂಲ ಜನಪದ ಕಲಾವಿದರನ್ನು ತಯಾರು ಮಾಡಲಿ ಎಂದರು.
ಆರ್.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಡಾ.ಎಚ್.ವಿ. ಬೆಳಗಲಿ, ವಿ.ಜಿ. ಪಾಟೀಲ. ಸಂಜೀವ ಧುಮ್ಮಕ್ಕನಾಳ, ಸುಮಂಗಲಾ ಹಿರೇಮಠ, ಜೀವಿಕಲಾ ಬಳಗದ ಅಧ್ಯಕ್ಷ ಗದಿಗೆಯ್ಯ ಹಿರೇಮಠ, ಜಾನಪದ ಕಲಾವಿದ ಡಾ. ರಾಮು ಮೂಲಗಿ, ವೀಣಾ ನೇಶ್ವಿ, ಶಾಲಿನಿ ಸಾಲಿಮಠ, ಮಂಜುನಾಥ ಪಾಟೀಲ, ಎಚ್.ಎಸ್. ರಾಮನಗೌಡ, ಬಸವರಾಜ ಸಂಬೋಜಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.