ಹುಬ್ಬಳ್ಳಿ: ಕಬ್ಬು ಬೆಳೆಯಲು ಉತ್ತಮ ನೀರಾವರಿ ಸೌಲಭ್ಯ ಇರಲೇಬೇಕೆಂಬ ಮಾತನ್ನು ಹುಸಿಯಾಗಿಸುವಂತೆ ಕಡಿಮೆ ನೀರಿನಲ್ಲಿ ಅತ್ಯುತ್ತಮ ಕಬ್ಬು ಬೆಳೆದು, ಅಧಿಕ ಇಳುವರಿ ಹಾಗೂ ಕಡಿಮೆ ನಿರ್ವಹಣೆ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾದವರು ಕಲಘಟಗಿ ತಾಲ್ಲೂಕಿನ ಗುಡ್ಡದಹುಲಿಕಟ್ಟಿ ಗ್ರಾಮದ ರೈತ ಮಲ್ಲಿಕಾರ್ಜುನ ಪಾಟೀಲ.

75 ವರ್ಷದ ಹರೆಯದಲ್ಲೂ ಕೃಷಿ ಕಾಯಕದತ್ತ ಒಲವು ಉಳಿಸಿಕೊಂಡಿರುವ ಇವರು, ಅಂಚೆ ಇಲಾಖೆಯಲ್ಲಿ 38 ವರ್ಷಗಳ ಕಾಲ ನೌಕರರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಬಳಿಕ 2010ರಿಂದ ತಮ್ಮ 4 ಎಕರೆ ಕೃಷಿ ಜಮೀನಿನಲ್ಲಿ ರಾಸಾಯನಿಕ ಮುಕ್ತ ಕೃಷಿ ಮಾಡುತ್ತ ಪೂರ್ಣಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

2 ಎಕರೆಯಲ್ಲಿ 900 ಮಹಾಗನಿ ಗಿಡಗಳು, ಅರ್ಧ ಎಕರೆಯಲ್ಲಿ 200 ಅಡಿಕೆ, 15 ತೆಂಗು, 200 ಏಲಕ್ಕಿ ಬಾಳೆ ಗಿಡಗಳನ್ನು ಬೆಳೆಸಿದ್ದಾರೆ. ಅಲ್ಲದೇ 8 ಗುಂಟೆ ಜಾಗದಲ್ಲಿ ಏರುಮಡಿ ಮಾಡಿ ಅರಿಸಿನ, ಹಾಗಲಕಾಯಿಬಳ್ಳಿ, ಅವರೆಬಳ್ಳಿ, ಮೆಣಸಿಕಾಯಿ, ಬದನೆಕಾಯಿ ಸೇರಿದಂತೆ 35 ರೀತಿಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

ಮುಕ್ಕಾಲು ಎಕರೆ ಜಮೀನಿನಲ್ಲಿ ತಗ್ಗು (ಪಿಟ್) ಮತ್ತು ಕಂದಕ (ಟ್ರಂಚ್) ವಿಧಾನಗಳಲ್ಲಿ ಕಳೆದ ಮೂರು ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದಾರೆ. ಕಲಫಟಗಿಯಿಂದ ₹4 ಸಾವಿರಕ್ಕೆ ಅಂದಾಜು 1 ಟನ್ ಕಬ್ಬಿನ ಬೀಜ ಖರೀದಿಸಿ, ಸಾಲಿನಿಂದ ಸಾಲಿಗೆ 12 ಅಡಿ ಅಂತರದಲ್ಲಿ 3X3 ಅಳತೆಯ ತಗ್ಗಿನಲ್ಲಿ ತಗ್ಗಿನಿಂದ ತಗ್ಗಿಗೆ ಎರಡರಿಂದ ಎರಡೂವರೆ ಅಡಿ ಅಂತರ ಹಾಗೂ ಅರ್ಧ ಅಡಿ ಆಳದಲ್ಲಿ ದಕ್ಷಿಣ –ಉತ್ತರ ದಿಕ್ಕಿನ ಮಾರ್ಗವಾಗಿ ಕಬ್ಬಿನ ಬೀಜಗಳನ್ನು ನೆಟ್ಟಿದ್ದಾರೆ.

‘ನಮ್ಮಲ್ಲಿ ಒಂದು ಕೊಳವೆಬಾವಿ ಇದ್ದು, ಕೇವಲ ಒಂದು ಇಂಚು ನೀರು ಸಿಕ್ಕಿದೆ. ಈ ಮಾದರಿಯಲ್ಲಿ ಕಬ್ಬು ಬೆಳೆಯುವುದರಿಂದ ನೀರು ಕಡಿಮೆ ಬಳಕೆಯಾಗುತ್ತದೆ. ಸೂರ್ಯನ ಬೆಳೆಕು ಎಥೇಚ್ಛವಾಗಿ ಸಿಗುವುದರಿಂದ ಬೆಳೆಗೆ ಹೆಚ್ಚು ಅನುಕೂಲ. ಎಕರೆಗೆ 700 ರಿಂದ 750 ತಗ್ಗುಗಳನ್ನು ನಿರ್ಮಿಸಬಹುದು. ನಾನೂ ಈ ಬಗ್ಗೆ ಕಲಬುರಗಿ, ಶಿರಹಟ್ಟಿ, ಬೆಳಗಾವಿ ಭಾಗದ ರೈತರ ಜಮೀನುಗಳಿಗೆ ಭೇಟಿ ನೀಡಿ ತಿಳಿದುಕೊಂಡಿದ್ದೆ. ಎಕರೆಗೆ ಅಂದಾಜು 60 ರಿಂದ 80 ಟನ್ ವರೆಗೂ ಇಳುವರಿ ಪಡೆಯಬಹುದು. ಕಡಿಮೆ ಬೀಜಗಳನ್ನು ಬಳಕೆ ಮಾಡಿ, ತಿಪ್ಪೆಗೊಬ್ಬರ ಬಳಸುವುದರಿಂದ ಗುಣಮಟ್ಟದ ಕಬ್ಬು ಪಡೆಯಬಹುದು. ಒಂದು ಕಬ್ಬು 2 ರಿಂದ 3 ಕೆ.ಜಿ ತೂಕವಿರುತ್ತದೆ. ಹಾಗಾಗಿ ನನಗೂ ಇದು ಲಾಭದಾಯಕ ಮತ್ತು ಉತ್ತಮ ಮಾರ್ಗ ಎನಿಸಿದೆ’ ಎಂದು ರೈತ ಮಲ್ಲಿಕಾರ್ಜುನ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಕಡಿಮೆ ನೀರು, ನಿರ್ವಹಣೆ: ‘ಬೆಳೆಗೆ ಒಂದು ದಿನ ನೀರು ಕೊಟ್ಟರೆ 20 ದಿನ ಹಾಗೆ ಬಿಡಬಹುದು. ಆದರೆ ಅದರ ಸುತ್ತಮುತ್ತಲಿನ ಪ್ರದೇಶ ಶುಷ್ಕವಾಗಿರುವಂತೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಮಲ್ಚಿಂಗ್ ಪದ್ಧತಿ ಅನುಸರಿಸುವುದರಿಂದ ಕಳೆ ನಿರ್ವಹಣೆ ಸುಲಭವಾಗುತ್ತದೆ. 25 ವರ್ಷಗಳ ವರೆಗೂ ಬೆಳೆಯ ಲಾಭ ಪಡೆಯಬಹುದು’ ಎಂದೂ ಅವರು ವಿವರಿಸಿದರು.

ಸಾವಯವ ಬೆಲ್ಲ ತಯಾರಿ

‘ಈಗಾಗಲೇ 2 ಬಾರಿ ಇಳುವರಿ ಪಡೆದಿದ್ದು ಮೊದಲ ಸಲ 50 ಟನ್ ಇಳುವರಿ ಪಡೆದಿದ್ದೇವು. ಬೀಜೋತ್ಪಾದನೆಗಾಗಿ ಟನ್ ಕಬ್ಬನ್ನು ₹4000 ದಂತೆ ಕೊಟ್ಟಿದ್ದೆ. ಸಕ್ಕರೆ ಕಾರ್ಖಾನೆಗೆ ₹3000 ದಂತೆ ಟನ್ ಕಬ್ಬು ಕೊಡಬೇಕು. ಅಲ್ಲಿ ಸಿಗುವ ದರವೂ ಕಡಿಮೆ. ಹಾಗಾಗಿ ಸಾವಯವ ಬೆಲ್ಲ ತಯಾರಿಕೆಗೆ ಮುಂದಾಗಿ ಈ ಸಲ 10ರಿಂದ 12 ಕ್ವಿಂಟಲ್ ಬೆಲ್ಲ ಮಾಡಿಸಿದೆ. ಏಲಕ್ಕಿ ಶುಂಠಿ ತುಪ್ಪ ಸೊಂಪು ಘಮದ ಬೆಲ್ಲವನ್ನೂ ತಯಾರಿಸಿದ್ದೇವೆ. 1 ಕಬ್ಬಿನಿಂದ 600 ಎಂ.ಎಲ್ ಹಾಲು ಸಿಗುತ್ತದೆ. ಟನ್ ಕಬ್ಬಿಗೆ 130 ಕೆ.ಜಿ ಬೆಲ್ಲ ತಯಾರಿಸಬಹುದು. ಕೆ.ಜಿಗೆ ₹70 ರಂತೆ ದರ ಸಿಕ್ಕಿದೆ. ಸ್ಥಳೀಯ ರೈತರಿಗೆ ಸುತ್ತಮುತ್ತಲಿನ ಗ್ರಾಮದವರಿಗೆ ಮಾರಾಟ ಮಾಡಿರುವೆ. ಕಬ್ಬಿನ ಮೌಲ್ಯವರ್ಧನೆ ಮಾಡಿರುವುದರಿಂದ ಟನ್ ಕಬ್ಬಿಗೆ ₹6000 ದರ ಸಿಕ್ಕಂತಾಗಿದೆ’ ಎಂದು ರೈತ ಮಲ್ಲಿಕಾರ್ಜುನ ಪಾಟೀಲ ಹೇಳಿದರು.

ಸಾವಯವ ಬೆಳೆಗಳನ್ನು ಬೆಳೆಯುವ ರೈತರ ಗುಂಪು ರಚಿಸಿದ್ದು ಅವರಿಗೆ ಸಾವಯವ ಕೃಷಿ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡುತ್ತೇನೆ. ಅವರಿಂದಲೂ ಮಾಹಿತಿ ಪಡೆದು ಉತ್ತಮ ಕೃಷಿಗೆ ಮುಂದಾಗಿರುವೆ
ಮಲ್ಲಿಕಾರ್ಜುನ ಪಾಟೀಲ, ಪ್ರಗತಿಪರ ರೈತ ಗುಡ್ಡದಹುಲಿಕಟ್ಟಿ ಕಲಘಟಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.