ಭಾನುವಾರ, ಸೆಪ್ಟೆಂಬರ್ 25, 2022
29 °C

ಮೌಲ್ಯಾಧರಿತ ಶಿಕ್ಷಣ ನೀಡಿ: ನಿಂಬಣ್ಣವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಘಟಗಿ: ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಶಿಕ್ಷಕರು, ಮಕ್ಕಳಿಗೆ ಮೌಲ್ಯಾ
ಧಾರಿತ ಶಿಕ್ಷಣ ನೀಡಬೇಕು ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.

ಪಟ್ಟಣದ ಗುಡ್ ನ್ಯೂಸ್ ಮಹಾ
ವಿದ್ಯಾಲಯದಲ್ಲಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಪಟ್ಟಣದಲ್ಲಿ ₹ 2.5ಕೋಟಿ ವೆಚ್ಚದಲ್ಲಿ ಅಡಿಟೋರಿಯಂ ನಿರ್ಮಾಣ ಮಾಡಲಾಗುವುದು. ಮತಕ್ಷೇತ್ರದಲ್ಲಿ ₹ 700 ಕೋಟಿ ಅನುದಾನದ ಅಭಿವೃದ್ಧಿ ಕೆಲಸ ನಡೆದಿವೆ’ ಎಂದರು.

ಸ್ವಾಮಿ ವಿವೇಕಾನಂದ ಆಶ್ರಮದ ವಿಜಯಾನಂದ ಸ್ವಾಮೀಜಿ ಮಾತನಾಡಿದರು. ತಾಲ್ಲೂಕಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನುಸೂಯಾ ಹೆಬ್ಬಳ್ಳಿಮಠ, ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ, ಸಮನ್ವಯಾಧಿಕಾರಿ ಕುಮಾರ್ ಕೆ.ಎಫ್., ಶಿಕ್ಷಣ ಸಂಯೋಜಕರಾದ ಪುಟ್ಟಪ್ಪ ಭಜಂತ್ರಿ, ಮಲ್ಲಿಕಾರ್ಜುನ ಪುರದನಗೌಡರ, ಎಸ್.ಎ. ಚಿಕ್ಕನರ್ತಿ, ಜಗದೀಶ ವಿರಕ್ತಮಠ, ರಾಜು ಹುಚ್ಚಣ್ಣವರ,  ಶಿವಾನಂದ ಭಜಂತ್ರಿ, ಪ್ರಭು ಗ್ಯಾನಪ್ಪನವರ, ಮುಕ್ಕಂದ ಅಂಚಟಗೇರಿ, ಸಿ.ಎಸ್ ಗ್ಯಾನಪ್ಪನವರ, ಉಮೇಶ ಬೆರುಡಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು