ಹುಬ್ಬಳ್ಳಿ: ‘ನೇಕಾರರ ಅಭಿವೃದ್ಧಿಗಾಗಿ ಕೈಮಗ್ಗ ಅಭಿವೃದ್ಧಿ ನಿಗಮ ವಿವಿಧ ಯೋಜನೆ ಹಮ್ಮಿಕೊಂಡಿದೆ. ಜನವರಿಯಿಂದ ಅನ್ವಯವಾಗುವಂತೆ ಮೂಲವೇತನಕ್ಕೆ ಶೇ 10ರಷ್ಟು ಹಣ ನೀಡಿ ವೇತನ ಪಾವತಿಗೆ ತೀರ್ಮಾನಿಸಲಾಗಿದೆ’ ಎಂದು ರಾಜ್ಯ ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್ ಹೇಳಿದರು.

‘ನಿಗಮದಡಿ ರಾಜ್ಯದ ವಿವಿಧೆಡೆ ಮತ್ತು ಮುಂಬೈ, ಚೆನ್ನೈ, ದೆಹಲಿಯಲ್ಲಿ ಸಾಕಷ್ಟು ಆಸ್ತಿ, ಮಳಿಗೆಗಳು ಇದ್ದು ಅವುಗಳ ದಾಖಲಾತಿಗಳನ್ನು ಸಂಗ್ರಹಿಸಲಾಗುತ್ತಿದೆ. ಅಗತ್ಯವಿರುವ ಕಡೆ ಅವುಗಳನ್ನು ನವೀಕರಣಗೊಳಿಸಿ ಬಾಡಿಗೆ ನೀಡಲಾಗುವುದು. ರಾಜ್ಯದಲ್ಲಿರುವ ಕೈಮಗ್ಗ ಘಟಕಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗಿದ್ದು, ನೂತನ ಮಾದರಿಯ ಕೈ ಮಗ್ಗಗಳ ವಿತರಿಸಲಾಗುವುದು’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ನೇಕಾರರ ಹಾಗೂ ನಿಗಮದ ಅಭಿವೃದ್ಧಿಗೆ ಬಜೆಟ್ನಲ್ಲಿ ₹75 ಕೋಟಿ ಮೀಸಲಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಸದ್ಯ ಇರುವ ಸಮಸ್ಯೆಗಳ ಪರಿಹಾರಕ್ಕೆ ₹15 ಕೋಟಿ ನೀಡುವಂತೆ ವಿನಂತಿಸಲಾಗಿದೆ’ ಎಂದು ಹೇಳಿದರು.

‘ನಿಗಮದಡಿ ರಾಜ್ಯದ ಎಂಟು ಕಡೆ ಪ್ರಿಯದರ್ಶಿನಿ ಬಟ್ಟೆ ಮಳಿಗೆಗಳಿದ್ದು, ಇನ್ನೂ ಹತ್ತು ಕಡೆ ತೆರೆಯಲು ಯೋಜನೆಯಿದೆ. ಇಳಕಲ್ ಸೀರೆ, ರೇಷ್ಮೆ ಸೀರೆ ಹಾಗೂ ನೇಕಾರರು ಸಿದ್ಧಪಡಿಸಿದ ಬಟ್ಟೆಗಳ ಮಾರಾಟದ ಮೂಲಕ ಅವರ ಕೆಲಸಕ್ಕೆ ಉತ್ತೇಜನ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.