ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವಿನಿಂದಲೇ ಸಾಯುವ ಭೀತಿ ಶುರುವಾಗಿತ್ತು

ಯುದ್ಧಪೀಡಿತ ಉಕ್ರೇನ್‌ನಲ್ಲಿ ಎದುರಿಸಿದ ಪರಿಸ್ಥಿತಿ ಬಿಚ್ಚಿಟ್ಟ ನಾಜಿಲ್ಲಾ ಗಾಜಿಪುರ
Last Updated 8 ಮಾರ್ಚ್ 2022, 15:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಉಕ್ರೇನ್‌ನಲ್ಲಿ ರಷ್ಯಾದ ದಾಳಿಯಿಂದಾಗಿ ಸಾಯುತ್ತೇವೆ ಎನ್ನುವ ಭೀತಿಗಿಂತ ಹಾಸ್ಟೆಲ್‌ನಲ್ಲಿದ್ದರೆ ಹಸಿವು ಅಥವಾ ಬಂಕರ್‌ನಲ್ಲಿ ಉಸಿರುಗಟ್ಟಿ ಸತ್ತು ಹೋಗುತ್ತೇವೆ ಎನ್ನುವ ಆತಂಕ ಕಾಡಿತು. ಆದ್ದರಿಂದ ಜೀವ ಕೈಯಲ್ಲಿ ಹಿಡಿದು ಹಾರ್ಕಿವ್‌ ನಗರ ತೊರೆದು ಬಂದೆ...’

ಹಾರ್ಕಿವ್‌ನ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್‌ ಮೊದಲ ವರ್ಷ ಓದುತ್ತಿರುವ ಹುಬ್ಬಳ್ಳಿಯ ನಾಜಿಲ್ಲಾ ಗಾಜಿಪುರ ಅವರು‘ಪ್ರಜಾವಾಣಿ’ ಮಂಗಳವಾರ ಆಯೋಜಿಸಿದ್ದ ‘ಫೇಸ್‌ಬುಕ್‌ ಲೈವ್‌’ ಕಾರ್ಯಕ್ರಮದಲ್ಲಿ ಅಲ್ಲಿ ಎದುರಿಸಿದ ಸವಾಲುಗಳನ್ನು ಹಂಚಿಕೊಂಡರು.

‘ದಾಳಿ ಆರಂಭವಾಗುವ ಮೊದಲು ಅಗತ್ಯ ವಸ್ತುಗಳನ್ನು ತಂದಿಟ್ಟುಕೊಳ್ಳಿ ಎಂದು ಹೇಳಿದ್ದರು. ಸೂಪರ್‌ ಮಾರ್ಕೆಟ್‌ನಲ್ಲಿ ಸಾಕಷ್ಟು ಸರತಿಯಿದ್ದ ಕಾರಣ ಹೆಚ್ಚು ತಿನಿಸು ತಂದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಯುದ್ಧ ಪ್ರಾರಂಭವಾದ ಮೂರ್ನಾಲ್ಕು ದಿನಗಳಲ್ಲಿ ತಿನಿಸು ಖಾಲಿಯಾಯಿತು. ಬಳಿಕ ಹನಿ ನೀರಿಗೂ ಪರದಾಡುವಂತಾಯಿತು. ಒಂದೇ ಬೇಸ್‌ಮೆಂಟ್‌ನಲ್ಲಿ ನೂರಾರು ಜನರನ್ನು ಇರಿಸಲಾಯಿತು. ಸಂಜೆಯಾದರೆ ಸಾಕು; ಬೆಳಕು ಕಡಿಮೆಯಾಗಿ ಉಸಿರಾಡಲು ಸಹ ತೊಂದರೆ ಎದುರಿಸುವಂತಾಯಿತು’ ಎಂದು ಹೇಳಿದರು.

‘ಇನ್ನೊಂದಿಷ್ಟು ದಿನ ಅಲ್ಲಿಯೇ ಕಳೆದಿದ್ದರೆ ನೀರು ಸಿಗಲಾರದೆ ಹಸಿವಿನಿಂದ ಸಾಯಬೇಕಾಗುತ್ತಿತ್ತು. ಅಲ್ಲಿನ ಸರ್ಕಾರ ಉಕ್ರೇನ್‌ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಆದ್ಯತೆ ನೀಡುತ್ತಿತ್ತು. ಬಳಿಕ ಭಾರತೀಯ ವಿದ್ಯಾರ್ಥಿನಿಯರಿಗೆ ಅವಕಾಶ’ ಎಂದು ನೆನಪುಗಳನ್ನು ಹಂಚಿಕೊಂಡರು.

ಈಗ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಖುಷಿಯಿದೆ. ಆದರೆ, ವಿದ್ಯಾಭ್ಯಾಸದ ಭವಿಷ್ಯ ಏನು ಎನ್ನುವ ಚಿಂತೆ ಕಾಡಿದೆ. ಸರ್ಕಾರ ಆದಷ್ಟು ಬೇಗನೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಪೂರ್ಣ ವಿಡಿಯೊ ನೋಡಲು:https://fb.watch/bCGJgapbHh/ ಲಿಂಕ್‌ ಕ್ಲಿಕ್‌ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT