ಮಂಗಳವಾರ, ಜುಲೈ 5, 2022
27 °C

ಹುಬ್ಬಳ್ಳಿ: ಮನೆಯೊಂದರಲ್ಲಿ ₹‌ 20 ಸಾವಿರ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಲ್ಲಿನ ನೇಕಾರ ಕಾಲೊನಿಯ ಗಣೇಶ ನಗರದಲ್ಲಿ ವಾಸವಾಗಿರುವ ಶೀತಲ್‌ ರಾಶಿನಕರ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ.

ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿದ ಕಳ್ಳರು ಕಿಟಕಿಯಿಂದ ಬಾಗಿಲು ತೆರೆದು ಮನೆಯಲ್ಲಿದ್ದ ₹20 ಸಾವಿರ ನಗದು ಮತ್ತು ₹36 ಸಾವಿರ ಮೌಲ್ಯದ ಎರಡು ಮೊಬೈಲ್‌ ಫೋನ್‌ಗಳನ್ನು ಕಳ್ಳತನ ಮಾಡಿದ್ದಾರೆ. ಕಸಬಾಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆನ್‌ಲೈನ್‌ ವಂಚನೆ: ಗೋ ನೈಸ್‌ ಕಂಪನಿಯ ಪ್ರತಿನಿಧಿ ಹೆಸರಿನಲ್ಲಿ ವಿದ್ಯಾನಗರದ ಮಹಿಳೆಯೊಬ್ಬರನ್ನು ನಂಬಿಸಿ ಅವರಿಂದ ₹60 ಸಾವಿರ ವಂಚನೆ ಮಾಡಲಾಗಿದೆ.

ನೀವು ಕಂಪನಿಯಿಂದ ಲಕ್ಕಿ ಡ್ರಾಗೆ ಆಯ್ಕೆಯಾಗಿದ್ದೀರಿ. ₹5 ಸಾವಿರ ಮೌಲ್ಯದ ಉಪಕರಣಗಳನ್ನು ಖರೀದಿಸಿದರೆ ಟಿವಿ, ಫ್ರಿಡ್ಜ್‌, ಲ್ಯಾಪ್‌ಟಾಪ್‌ ಮತ್ತು ಐ ಫೋನ್‌ ಉಡುಗೊರೆಯಾಗಿ ಲಭಿಸುತ್ತದೆ ಎಂದು ಹೇಳಿದ್ದನ್ನು ನಂಬಿ ಆ ಮಹಿಳೆ ₹5,498 ಮೌಲ್ಯದ ಉಪಕರಣ ಖರೀದಿಸಿದ್ದಾರೆ.

ಇದಾದ ಬಳಿಕ ಇನ್ನೊಬ್ಬ ವ್ಯಕ್ತಿ ಕರೆ ಮಾಡಿ ನೀವು ಬಯಸಿದ ಉಡುಗೊರೆ ಪಡೆಯಲು ಹಣ ನೀಡಬೇಕು ಎಂದು ಹೇಳಿ ಹಂತಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು