ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಹೇಳನ ಮಾಡಿದವರು ಕ್ಷಮೆ ಕೇಳಲಿ: ನಿವೃತ್ತ ಸೈನಿಕರ ಒತ್ತಾಯ

Last Updated 20 ಜನವರಿ 2019, 8:29 IST
ಅಕ್ಷರ ಗಾತ್ರ

ಧಾರವಾಡ:‘ಸೈನಿಕರ ಬಗ್ಗೆ ಯಾಕೆ ಅವಹೇಳನಕಾರಿಯಾಗಿ ಮಾತನಾಡಿರುವ ಶಿವ ವಿಶ್ವನಾಥನ್ ಅವರನ್ನು ಸ್ಥಳಕ್ಕೆ ಕರೆಸಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ. ಸೈನಿಕರ ಬಗ್ಗೆ ಹೀಗೆಲ್ಲಾ ಮಾತಾಡಿದ್ರೆ ನಾವು ಸುಮ್ಮನಿರಲ್ಲ. ಮುಂದೆ ಏನಾಗುತ್ತೋ ನೋಡ್ರೀ’ ಎಂದು ನಿವೃತ್ತ ಕ್ಯಾಪ್ಟನ್ಶಿವಾನಂದ ತಳ್ಳಿ ಎಚ್ಚರಿಸಿದರು.

ಧಾರವಾಡ ಸಾಹಿತ್ಯ ಸಂಭ್ರಮದ ಎರಡನೇ ದಿನವಾದ ಶನಿವಾರ ‘ರಾಷ್ಟ್ರೀಯತೆ: ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು’ ಎಂಬ ವಿಷಯದ ಬಗ್ಗೆ ಹಿರಿಯ ಚಿಂತಕ ಡಾ. ಶಿವ ವಿಶ್ವನಾಥನ್ ವಿಚಾರ ಮಂಡಿಸುವಾಗ ‘How Long We Sustain Rape’ (ಅತ್ಯಾಚಾರವನ್ನು ಇನ್ನೆಷ್ಟು ದಿನ ಸಹಿಸಲು ಸಾಧ್ಯ) ಎಂದು ಹೇಳಿದ್ದರು.

‘ಯಾಕಪ್ಪಾ ನಾವು ಏನು ಮಾಡಿದ್ದೀವಿ ನಿಮಗೆ? ಸೈನಿಕರ ಬಗ್ಗೆ ಮಾತಾಡಲು ಇದೇ ಟಾಪಿಕ್ ಸಿಕ್ಕಿದ್ದಾ ನಿಮಗೆ? ಬೇರೆ ಏನೂ ಸಿಗಲಿಲ್ವಾ? ಇಷ್ಟೊಂದು ಓದಿರೋರು ಇಲ್ಲಿಗೆ ಬಂದಿದ್ದೀರಿ. ಹೊಸ ತಲೆಮಾರಿನವರಿಗೆ ಏನು ಕಲಿಸ್ತಾ ಇದ್ದೀರಿ?ಇದು ಎಂಥ ಸಮ್ಮೇಳನ? ಇಂಥ ಪವಿತ್ರ ಸ್ಥಳದಲ್ಲಿ ನಿಂತು ಹೀಗೆ ಮಾತಾಡೋದು ಸರೀನಾ? ಇಂಥ ಸಾಹಿತಿಗಳನ್ನು ಯಾಕೆ ಕರೆಸ್ತಾರೆ? ಇಲ್ಲಿರೋರೆ ಇದಕ್ಕಿಂತ ಒಳ್ಳೇದು ಮಾತಾಡ್ತಾರೆ’ ಎಂದು ಶಿವಾನಂದ ತಳ್ಳಿ ಬೇಸರ ವ್ಯಕ್ತಪಡಿಸಿದರು.

‘ಶಿವ ವಿಶ್ವನಾಥನ್ ಅವರನ್ನು ಸ್ಥಳಕ್ಕೆ ಕರೆಸಬೇಕು. ಅವರೇನೋ ಪರಾರಿಯಾಗಿದ್ದಾರಂತೆ ಇವರೇ ಹೇಳ್ತಿದ್ದಾರೆ. ನಾವು ರಾಜ್ಯವ್ಯಾಪಿ ಹೋರಾಟ ಮಾಡ್ತೀವಿ. ಮುಂದೆ ಸೈನಿಕರ ಬಗ್ಗೆ ಮಾತನಾಡಿದ್ರೆ ನಾವು ಸುಮ್ಮನಿರಲ್ಲ’ ಎಂದು ಅವರು ಎಚ್ಚರಿಸಿದರು.ನಿವೃತ್ತ ಸೈನಿಕರು ಶಿವ ವಿಶ್ವನಾಥನ್ ವಿರುದ್ಧ ಘೋಷಣೆಗಳನ್ನೂ ಕೂಗಿದರು. ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ ಅವರನ್ನು ಸಮಾಧಾನಪಡಿಸಲು ಯತ್ನಿಸಿದರು.

ನಿವೃತ್ತ ಸೈನಿಕರ ಪರವಾಗಿ ಪ್ರತಿಭಟನೆ ದಾಖಲಿಸಲು ವೇದಿಕೆ ಮೇಲೆ ಅವಕಾಶ ನೀಡಲಾಯಿತು. ಇಂಥ ಹೇಳಿಕೆ ನೀಡಿದ ಶಿವ ವಿಶ್ವನಾಥನ್ ದೇಶಬಿಟ್ಟು ಹೋಗಬೇಕು ಎಂದು ಒತ್ತಾಯಿಸಿದರು. ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ ನಿವೃತ್ತ ಸೈನಿಕರ ಕ್ಷಮೆಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT