ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಗಾಕ್ಕೆ ಕಾರು ಡಿಕ್ಕಿ: ಮೂವರ ಸಾವು

Last Updated 8 ಆಗಸ್ಟ್ 2022, 4:49 IST
ಅಕ್ಷರ ಗಾತ್ರ

ಕುಂದಗೋಳ: ತಾಲ್ಲೂಕಿನ ಜಿಗಳೂರು ಹತ್ತಿರ ದರ್ಗಾಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಳಗಾವಿಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದ ರವೀಂದ್ರ ಲಕ್ಷ್ಮಿಕಾಂತ್ ನಾಗನಾಥ್ (56), ಅವರ ಮಾವ ನಿವೃತ್ತ ಸ್ಟಾಫ್‌ನರ್ಸ್ ಹುಬ್ಬಳ್ಳಿ ನವನಗರದ ಹನುಮಂತಪ್ಪ ಗೂರಪ್ಪ ಬೇವಿನಕಟ್ಟೆ (70), ಅತ್ತೆ ನಿವೃತ್ತ ಸ್ಟಾಫ್‌ನರ್ಸ್ ರೇಣುಕಾ ಹನುಮಂತಪ್ಪ ಬೇವಿನಕಟ್ಟಿ (68) ಮೃತಪಟ್ಟವರು.

ರವೀಂದ್ರ ಅವರ ಪತ್ನಿ ಅರುಂಧತಿ ರವೀಂದ್ರ ನಾಗನಾಥ್ (48) ತೀವ್ರವಾಗಿ ಗಾಯಗೊಂಡಿದ್ದು, ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಗೃಹ ಪ್ರವೇಶ ಸಮಾರಂಭ ಮುಗಿಸಿಕೊಂಡು ಹುಬ್ಬಳ್ಳಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT