ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಕಿಮ್ಸ್‌ ಮುಖ್ಯದ್ವಾರದಲ್ಲಿ ಟ್ರಾಫಿಕ್‌ ಕಿರಿಕಿರಿ

ಸಾರಿಗೆ ಸಂಸ್ಥೆ ಬಸ್‌, ಬೇಂದ್ರೆ ಬಸ್‌ಗಳ ನಿಲುಗಡೆಯಿಂದ ಸಂಚಾರ ದಟ್ಟಣೆ
Last Updated 14 ಜನವರಿ 2022, 15:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪುಣೆ–ಬೆಂಗಳೂರು ಹಳೆ ರಸ್ತೆಯ ಕಿಮ್ಸ್‌ ಮುಖ್ಯ ದ್ವಾರದ ಬಳಿ ಸಾರಿಗೆ ಸಂಸ್ಥೆ ಬಸ್‌, ಬೇಂದ್ರೆ ನಗರ ಸಾರಿಗೆ ಬಸ್‌ಗಳ ನಿಲುಗಡೆಯಿಂದ ಸಂಚಾರ ದಟ್ಟಣೆಯುಂಟಾಗುತ್ತಿದೆ.

ಈ ರಸ್ತೆಯ ಹೆಚ್ಚಿನ ಪ್ರದೇಶವನ್ನು ಬಿಆರ್‌ಟಿಎಸ್‌ ಕಾರಿಡಾರ್ ವ್ಯಾಪಿಸಿದ್ದು, ಸಾಮಾನ್ಯ ರಸ್ತೆ ಅತ್ಯಂತ ಕಿರಿದಾಗಿರುವುದರಿಂದ ಕಿಮ್ಸ್‌ ಮುಖ್ಯ ದ್ವಾರದಲ್ಲಿ ಆಗಾಗ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಧಾರವಾಡ–ಹುಬ್ಬಳ್ಳಿ ಮಾರ್ಗದಲ್ಲಿ ಕಿಮ್ಸ್‌ ಮುಖ್ಯದ್ವಾರಕ್ಕೆ ಮೊದಲೇ ಸಾರಿಗೆ ಬಸ್‌ಗಳ ನಿಲುಗಡೆಗೆ ಫಲಕ ಅಳವಡಿಸಿದ್ದರೂ, ಅಲ್ಲಿ ನಿಲ್ಲದೆ, ಕಿಮ್ಸ್‌ ವೃತ್ತ ದಾಟಿಮುಖ್ಯ ದ್ವಾರದ ಅಂಚಿನಲ್ಲೇ ನಿಲುಗಡೆ ಮಾಡಲಾಗುತ್ತಿದೆ. ಮೊದಲೇ ರಸ್ತೆ ಕಿರಿದಾಗಿರುವುದರಿಂದ ಬಸ್‌ಗಳ ನಿಲುಗಡೆಯಿಂದ ಇನ್ನಷ್ಟು ಸಮಸ್ಯೆಯಾಗುತ್ತಿದೆ.

ಟ್ರಾಫಿಕ್‌ ಸಿಗ್ನಲ್‌ ಅನುಸರಿಸುವ ಭರದಲ್ಲಿ ವಾಹನ ಸವಾರರರು ಮುನ್ನುಗ್ಗಿದಾಗ ಬಸ್‌ಗಳ ನಿಲುಗಡೆಯಿಂದ ಸಂಚಾರ ದಟ್ಟಣೆ ಏರ್ಪಡುತ್ತಿದೆ. ನಾಲ್ಕು ದಿಕ್ಕಿನಿಂದ ಸಂಚರಿಸುವ ವಾಹನಗಳು ದಾರಿಗಾಗಿ ಕಿರಿಕಿರಿ ಅನುಭವಿಸುವಂತಾಗಿದೆ.

ಸಂಜೆ ವೇಳೆ ಕಿಮ್ಸ್‌ ವೃತ್ತದಲ್ಲಿ ರಸ್ತೆ ದಾಟಿವುದೇ ಸವಾಲಾಗಿದ್ದು, ದಿಢೀರ್‌ ಸಂಚಾರ ದಟ್ಟಣೆ ತುಂಬಾ ಕಿರಿಕಿರಿ ಎನಿಸಲಿದೆ. ಎಲ್ಲಾ ದಿಕ್ಕುಗಳಿಂದಲೂ ವಾಹನಗಳು ಬರುವುದರಿಂದ, ಯಾವ ಕಡೆ ಹೆಜ್ಜೆ ಇಡಬೇಕೆಂಬುದೇ ತೋಚುವುದಿಲ್ಲ ಎನ್ನುತ್ತಾರೆ ಖಾಸಗಿ ಕಂಪನಿಯೊಂದರ ಉದ್ಯೋಗಿ ಮಂಜುಳಾ.

ಕಿಮ್ಸ್‌ ವೃತ್ತಕ್ಕೆ ಮೊದಲೇ ಬಸ್‌ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿದೆ. ಪ್ರಯಾಣಿಕರ‍್ಯಾರೂ ಬಸ್‌ ಏರಿ, ಇಳಿಯದ ಕಾರಣ ಮೊದಲು
ನಿಲುಗಡೆ ಮಾಡಲಾಗುತ್ತಿದ್ದ ಸ್ಥಳದಲ್ಲೇ ಬಸ್‌ ನಿಲುಗಡೆ ಮಾಡಲಾಗುತ್ತಿದೆ ಎಂದು ಸಾರಿಗೆ ಸಂಸ್ಥೆಯ ಸಂಚಾರ ವಿಭಾಗದ ಅಧಿಕಾರಿ ವಿವೇಕಾನಂದ ವಿಶ್ವಜ್ಞ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT