ಹುಬ್ಬಳ್ಳಿ: ಉಗಾರ ಖುರ್ದ್–ಕುಡಚಿ ಭಾಗದ ನಡುವಿನ ಜೋಡಿ ಮಾರ್ಗದ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಎಸ್.ಎಸ್.ಎಸ್ ಹುಬ್ಬಳ್ಳಿ-ಮಿರಜ್ ಡೈಲಿ ಎಕ್ಸ್‌ಪ್ರೆಸ್ (17332) ಅನ್ನು ಸೆ.4ರಿಂದ 8ರ ವರೆಗೆ ಹಾಗೂ ಮಿರಜ್-ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ (17331) ರೈಲನ್ನು ಸೆ.5ರಿಂದ 9ರ ವರೆಗೆ ರದ್ದುಗೊಳಿಸಲಾಗಿದೆ.
ಮಿರಜ್-ಕ್ಯಾಸಲ್ ರಾಕ್ ಡೈಲಿ ಎಕ್ಸ್‌ಪ್ರೆಸ್ (17333) ಹಾಗೂ ಕ್ಯಾಸಲ್ ರಾಕ್-ಮಿರಜ್ ಡೈಲಿ ಎಕ್ಸ್‌ಪ್ರೆಸ್ (17334) ರೈಲನ್ನು ಸೆ.4ರಿಂದ ಸೆ.8 ರವರೆಗೆ ರದ್ದುಗೊಳಿಸಲಾಗುತ್ತಿದೆ.
ಭಾಗಶಃ ರದ್ದು: ತಿರುಪತಿಯಿಂದ ಹೊರಡುವ ತಿರುಪತಿ-ಕೊಲ್ಹಾಪುರ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್ (17415) ರೈಲು ಸಂಚಾರವನ್ನು ಸೆ.3ರಿಂದ 7ರವರೆಗೆ ಬೆಳಗಾವಿಯಲ್ಲಿ ಮೊಟಕುಗೊಳಿಸಲಾಗುವುದು.
ಕೊಲ್ಹಾಪುರ-ತಿರುಪತಿ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್ (17416) ರೈಲನ್ನು ಸೆ.4ರಿಂದ 8 ರವರೆಗೆ ಕೊಲ್ಹಾಪುರ-ಬೆಳಗಾವಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಈ ರೈಲು ನಿಗದಿತ ಸಮಯದಲ್ಲಿ ಕೊಲ್ಹಾಪುರ ಬದಲು ಬೆಳಗಾವಿ ನಿಲ್ದಾಣದಿಂದ ಸಂಚಾರ ಆರಂಭಿಸಲಿದೆ.
ವಿಳಂಬ: ಮಿರಜ್-ಕೆ.ಎಸ್.ಆರ್ ಬೆಂಗಳೂರು ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ (16590) ರೈಲು ಸೆ.3, 4 ಮತ್ತು 5ರಂದು 40 ನಿಮಿಷ ಹಾಗೂ ಸೆ.8ರಂದು ಒಂದು ಗಂಟೆ ತಡವಾಗಿ ಮಿರಜ್ ನಿಲ್ದಾಣದಿಂದ ಸಂಚಾರ ಆರಂಭಿಸಲಿದೆ.
ಪಂಢರಪುರ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ (16542) ರೈಲು ಸೆ.8ರಂದು ಪಂಢರಪುರ ನಿಲ್ದಾಣದಿಂದ ಒಂದು ಗಂಟೆ ತಡವಾಗಿ ಸಂಚಾರ ಆರಂಭಿಸಲಿದೆ.
ಮಾರ್ಗ ಮಧ್ಯ ನಿಯಂತ್ರಣ: ಸೆ.4ರಂದು ಎರ್ನಾಕುಲಂ ನಿಲ್ದಾಣದಿಂದ ಹೊರಡುವ ಎರ್ನಾಕುಲಂ-ಪುಣೆ ಎಕ್ಸ್‌ಪ್ರೆಸ್ (11098) ರೈಲನ್ನು ಮಾರ್ಗ ಮಧ್ಯ 30 ನಿಮಿಷ ನಿಯಂತ್ರಿಸಲಾಗುತ್ತಿದೆ.
ಸೆ.4ರಂದು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ಹಜರತ್ ನಿಜಾಮುದ್ದೀನ್-ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12782) ರೈಲನ್ನು ಮಾರ್ಗ ಮಧ್ಯ 30 ನಿಮಿಷ ನಿಯಂತ್ರಿಸಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.