ಗುಡಗೇರಿ (ಧಾರವಾಡ ಜಿಲ್ಲೆ): ಹುಬ್ಬಳ್ಳಿ ಸಮೀಪದ ಗುಡಗೇರಿ-ಯಲವಿಗಿ ಮಾರ್ಗ ಮಧ್ಯೆ ಶುಕ್ರವಾರ ಬೆಳಿಗ್ಗೆ ವಿದ್ಯುತ್ ತಾಂತ್ರಿಕ ಸಮಸ್ಯೆ ತಲೆದೋರಿದ ಪರಿಣಾಮ ವಂದೇ ಭಾರತ ರೈಲು ಮತ್ತು ಗೂಡ್ಸ್ ರೈಲಿನ ಸುಗಮ ಸಂಚಾರಕ್ಕೆ ಅಡಚಣೆಯಾಯಿತು. ಎರಡೂ ರೈಲುಗಳು ಸುಮಾರು 30 ನಿಮಿಷ ತಡವಾಗಿ ಸಂಚರಿಸಿದವು.

ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಂದೇ ಭಾರತ ರೈಲು ಬೆಳಿಗ್ಗೆ 10 ಗಂಟೆ ಸುಮಾರಿಗೆ, ಗುಡಗೇರಿ ಬಳಿ ಸಮೀಪಿಸುತ್ತಿದ್ದಂತೆಯೇ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡಿತು. ಇದರಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಇದರಿಂದ ಗೂಡ್ಸ್ ರೈಲಿಗೂ ತೊಂದರೆಯಾಯಿತು. ವಿದ್ಯುತ್ ಸಮಸ್ಯೆ ಸರಿಪಡಿಸಿದ ಬಳಿಕ ಎರಡೂ ರೈಲುಗಳ ಸಂಚಾರ ಮುಂದುವರೆಯಿತು.

ರೈಲುಗಳ ಸಂಚಾರ ಸ್ಥಗಿತಗೊಂಡ ಕಾರಣ ಗುಡಗೇರಿ - ಗೌಡಗೇರಿ ರೈಲ್ವೆ ಗೇಟ್ ಅನ್ನು 45 ನಿಮಿಷಗಳವರೆಗೆ ತೆರೆಯಲಿಲ್ಲ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು. ರೈಲು ಗೇಟ್ ತೆರೆದ ಕೂಡಲೇ ಎಲ್ಲರೂ ವೇಗವಾಗಿ ಸಾಗಲು ಯತ್ನಿಸಿದಾಗ, ಕೆಲ ಹೊತ್ತು ವಾಹನ ದಟ್ಟಣೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.