ಅಳ್ನಾವರ: ‘ಸಮಾಜ ಪ್ರಗತಿಗೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವುದು ಮುಖ್ಯ’ ಎಂದು ಧಾರವಾಡದ ಬಿಡಿಎಸ್‌ಎಸ್ ಸಂಸ್ಥೆಯ ನಿರ್ದೇಶಕ ಪೀಟರ್ ಹೇಳಿದರು.
ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ, ಕಾರಿತಾಸ ಇಂಡಿಯಾ ಸಂಸ್ಥೆ ಹಾಗೂ ಮಹಿಳಾ ಮಂಡಳದ ಸಹಯೋಗದಲ್ಲಿ ಉಜ್ಜೀವಿನಿ ಯೋಜನೆಯಡಿ ಡೋರಿ ಗ್ರಾಮದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡೋರಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ದೇವೇಂದ್ರ ಖಾನಾಪುರ ಮಾತನಾಡಿ, ಸರ್ಕಾರ ಮಹಿಳೆಯರಿಗೆ ಹಲವು ಯೋಜನೆಗಳನ್ನು ನೀಡಿದೆ. ಅವುಗಳ ಸದುಪಯೋಗ ಪಡೆದುಕೊಂಡು ಪ್ರಗತಿ ಸಾಧಿಸಬೇಕು ಎಂದರು.
ಬಿಡಿಎಸ್‌ಎಸ್ ಸಂಸ್ಥೆಯ ಉಜ್ಜೀವಿನಿ ಯೋಜನೆಯ ಸಂಯೋಜಕ ಎ.ಬಿ. ಪಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಣಚಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ ಕದಂ, ಪಿಡಿಒ ಸುಜಾತಾ ಕೊಪ್ಪದ, ದಾಕ್ಷಾಯಣಿ ಗೋವೆಕರ, ಯಲ್ಲವ್ವ ನಾಯ್ಕರ, ಅಲ್ಲಾಭಕ್ಷ ಬಡಗಿ, ಸುಲೆಮಾನ ಪಾಟೀಲ, ಮಂಜುಳಾ ಹುಂಡೇಕರ, ಶಾರದಾ ಧಾರವಾಡ ಇದ್ದರು.
ಶೈಲಾ ಹಿರೇಮಠ ಸ್ವಾಗತಿಸಿದರು. ರಾಧಾ ಕಮಚಿಕೊಪ್ಪ ನಿರೂಪಿಸಿದರು. ಶಾಂತಾ ಕಾಳೆ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.