ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಮೂತ್ರಪಿಂಡ ದಿನ: ಜಾಗೃತಿ ಜಾಥಾ

Published 16 ಮಾರ್ಚ್ 2024, 16:02 IST
Last Updated 16 ಮಾರ್ಚ್ 2024, 16:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಕಿಮ್ಸ್‌ನ ನೆಪ್ರೊಲಜಿ ವಿಭಾಗವು ಯೂರಾಲಜಿ, ಅನಸ್ತೇಶಿಯ, ನ್ಯುರೊ ಹಾಗೂ ನ್ಯೂರೊ ಸರ್ಜರಿ ವಿಭಾಗದ ಸಹಯೋಗದಲ್ಲಿ ಈಚೆಗೆ ಜಾಗೃತಿ ಜಾಥಾ ಹಮ್ಮಿಕೊಂಡಿತ್ತು.

ಮೆಡಿಕಲ್, ನರ್ಸಿಂಗ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು, ಸನಾ ಹಾಗೂ ಕೆಎಲ್‌ಇ ಕಾಲೇಜಿನ ಶುಶ್ರೂಷ ವಿಭಾಗದ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡರು.

ಜಾಥಾದಲ್ಲಿ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಎಂಬ ಘೋಷಣೆ ಕೂಗಿ, ಅರಿವು ಮೂಡಿಸಲಾಯಿತು.

ಆಸ್ಪತ್ರೆ ಆವರಣದಲ್ಲಿ ವಿದ್ಯಾರ್ಥಿಗಳು ಅಂಗಾಂಗದಾನದ ಕಿರುನಾಟಕ ಪ್ರದರ್ಶಿಸಿದರು. ಚಾಲುಕ್ಯ ಸಭಾಂಗಣದಲ್ಲಿ ಡಾ. ವೆಂಕಟೇಶ ಮೊಗೇರ ನೇತೃತ್ವದಲ್ಲಿ ವಿವಿಧ ವಿಚಾರಗಳ ಕುರಿತು ಉಪನ್ಯಾಸ, ಸಂವಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT