ಹುಬ್ಬಳ್ಳಿ: ಶೈಕ್ಷಣಿಕ ಪ್ರವಾಸವನ್ನು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೇ ಕೈಗೊಳ್ಳಬೇಕು ಮತ್ತು ಡಿಸೆಂಬರ್ ಒಳಗೆ ಪ್ರವಾಸ ಮುಗಿಸಬೇಕು ಎಂಬ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆದೇಶವನ್ನು ಉಲ್ಲಂಘಿಸಿದ ಪ್ರಕರಣ ಶುಕ್ರವಾರ ಬೆಳಕಿಗೆ ಬಂತು.

ಕುಂದಗೋಳ ತಾಲ್ಲೂಕು ಬರದ್ವಾಡ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಮೂರು ಟಾಟಾ ಏಸ್ ವಾಹನಗಳಲ್ಲಿ ಕರೆ ತಂದ ಶಿಕ್ಷಕರು ಸರ್ಕಾರದ ಆದೇಶ ಉಲ್ಲಂಘಿಸಿದರು. ಅಂದಾಜು 70 ಬಾಲಕ- ಬಾಲಕಿಯರನ್ನು ಈ ವಾಹನಗಳಲ್ಲಿ ತುಂಬಿಕೊಂಡು ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿಗೆ ಕರೆತರಲಾಗಿತ್ತು.

ಒತ್ತೊತ್ತಾಗಿ ಕೂತು ಬಂದಿದ್ದ ಅವರು ಕಿಮ್ಸ್‌ಗೂ ಭೇಟಿ ನೀಡಬೇಕಾಗಿತ್ತು. ಬಿವಿಬಿ ಕಾಲೇಜಿಗೆ ಬರುವಷ್ಟರಲ್ಲಿ ಸಾರ್ವಜನಿಕರಿಗೆ ವಿಷಯ ಗೊತ್ತಾಯಿತು. ಮಾಧ್ಯಮಗಳಿಗೂ ಸುದ್ದಿ ತಲುಪಿತು. ಆಗ ವಿಷಯದ ಗಂಭೀರತೆ ಅರಿತ ಶಿಕ್ಷಕರು, ಮೂರೂ ವಾಹನಗಳನ್ನು ವಾಪಸು ಕಳಿಸಿದರು. ಕೆಎಸ್‌ಆರ್‌ಟಿಸಿ ಬಸ್ಸಿನಲ್ಲೇ ವಿದ್ಯಾರ್ಥಿಗಳನ್ನು ವಾಪಸ್ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದರು.

‘ಟಾಟಾ ಏಸ್ ವಾಹನಗಳಲ್ಲಿ ದನಗಳ, ವಸ್ತುಗಳ ಸಾಗಾಟವನ್ನು ನೋಡಿದ್ದೇವೆ. ಆದರೆ ವಿದ್ಯಾರ್ಥಿಗಳ ಸಾಗಾಟವನ್ನು ನೋಡಿರಲಿಲ್ಲ’ ಎಂದು ಬಿವಿಬಿ ಎಂಜಿನಿಯರಿಂಗ್ ವಿದ್ಯಾರ್ಥಿ ರವಿ ನಗರಕರ ಆಶ್ಚರ್ಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.