ಧಾರವಾಡ: ಲೋಕಸಭಾ ಚುನಾವಣೆ - 2014ಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ನೀತಿಸಂಹಿತೆ ಬುಧ ವಾರದಿಂದಲೇ ಜಾರಿಯಾಗಿದೆ ಎಂದು ಜಿಲ್ಲಾ ಚುನಾವ ಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದರು.

ಸಂಜೆ ಅಧಿಕಾರಿಗಳೊಂದಿಗಿನ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ-–ಧಾರವಾಡದ ಮಹಾನಗರ ಸಭೆಯ 12 ವಲಯ ಕಚೇರಿಗಳ ವ್ಯಾಪ್ತಿಯಲ್ಲಿ, ಅದರಂತೆ ಜಿಲ್ಲೆಯ ಎಲ್ಲ ಪುರಸಭೆ ವ್ಯಾಪ್ತಿ, ತಹಶೀಲ್ದಾರ್ ವ್ಯಾಪ್ತಿ ಮತ್ತು ತಾಲ್ಲೂಕು ಕಾರ್ಯನಿರ್ವಾಹಕರ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರಿದ ಅಥವಾ ಯೋಜನೆಗಳನ್ನು ಬಿಂಬಿಸುವ ಸರ್ಕಾರದ ಫಲಕ, ಪೋಸ್ಟರ್ ಹೋರ್ಡಿಂಗ್ಸ್, ಧ್ವಜ, ವಾಲ್ ಪೋಸ್ಟರ್ಗಳಿದ್ದಲ್ಲಿ ತೆಗೆದು ಹಾಕಬೇಕು. ಇಲ್ಲದಿದ್ದರೆ ಭದ್ರವಾಗಿ ಬಿಳಿಪಟ್ಟಿ ಹಚ್ಚಿ ಮುಚ್ಚಬೇಕು. ಈ ಕಾರ್ಯ ತಕ್ಷಣ ಜರುಗಿಸ ಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೊಸ ಕಾಮಗಾರಿಗಳಿಗೆ ಚಾಲನೆ ನೀಡುವುದಾ ಗಲಿ, ಸಭೆ ಸಮಾರಂಭಗಳನ್ನು ನಡೆಸುವುದಾಗಲಿ ಮಾಡ ಕೂಡದು. ಅಂತಹ ಸನ್ನಿವೇಶಗಳೇನಾದರೂ ಬಂದರೆ ನೀತಿ ಸಂಹಿತೆ ಜಾರಿಯಾಗಿದೆ, ಚುನಾವಣೆ ಅಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯ ವಾಗಿದೆ ಎಂದು ತಿಳಿಸಿದರು.

ಹೊಸ ಟೆಂಡರ್ ಅಥವಾ ಜಾಹೀರಾತುಗಳನ್ನು ಬಿಡುಗಡೆ ಮಾಡತಕ್ಕದ್ದಲ್ಲ. ಈಗಾಗಲೇ ಟೆಂಡರ್ ಕರೆದಿದ್ದರೆ, ಚುನಾವಣೆ ಪ್ರಕ್ರಿಯೆ ಮುಗಿಯುವ ವರೆಗೂ ಟೆಂಡರ್ ತೆರೆಯಕೂಡದು ಮತ್ತು ಜಾರಿಗೊಳಿಸತಕ್ಕದ್ದಲ್ಲ ಎಂದರು.

ಅಧಿಕಾರಿಗಳ ಅಥವಾ ಸಿಬ್ಬಂದಿಗಳ ವರ್ಗಾವಣೆ ಮಾಡಕೂಡದು, ಯಾರಿಗಾದರೂ ವರ್ಗಾವಣೆ ಯಾಗಿದ್ದರೆ ಅಂತಹವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬಾರದು ಎಂದು ಅವರು ತಿಳಿಸಿದರು.

ಸರ್ಕಾರಿ ಹಾಗೂ ಸರ್ಕಾರೇತರ ಖಾಸಗಿ ಸಂಸ್ಥೆಗಳ ವಾಹನಗಳನ್ನು ಚುನಾವಣೆ ಕಾರ್ಯಕ್ಕೆ ಬಳಸಿಕೊಳ್ಳ ಲಾಗುತ್ತದೆ. ಚುನಾವಣೆ ನೀತಿ ಜಾರಿಯಾದ ಪ್ರಯುಕ್ತ ಜನಪ್ರತಿನಿಧಿಗಿಳಿಗೆ ನೀಡಲಾದ ಸರ್ಕಾರಿ ವಾಹನ ಗಳನ್ನು ಹಿಂಪಡೆಯಲಾಗಿದೆ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಲೋಕೇಶಕು ಮಾರ್, ಹುಬ್ಬಳ್ಳಿ-–ಧಾರವಾಡ ಮಹಾನಗರ ಪಾಲಿ ಕೆಯ ಆಯುಕ್ತ ರಮಣದೀಪ ಚೌಧರಿ, ಪ್ರೊಬೇಶನರಿ ಐಎಎಸ್ ಅಧಿಕಾರಿ ಚಾರುಲತಾ, ಡಿಸಿಪಿ ಸುಭಾಷ ಗುಡಿಮನಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹಾಗೂ ಧಾರವಾಡ ಮತ್ತು ಸವಣೂರ ಉಪವಿಭಾಗಾಧಿಕಾರಿಗಳು, ಎಲ್ಲ ತಾಲೂಕಿನ ತಹಶೀಲ್ದಾರರು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳು, ಹೆಸ್ಕಾಂ ಅಧಿಕಾರಿಗಳು ಮಹಾನಗರ ಪಾಲಿಕೆಯ ವಲಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.