ಹುಬ್ಬಳ್ಳಿ: ‘ದೊಡ್ಡ ಕೆಲಸಗಳನ್ನು ಮಾಡುವಾಗ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ. ಅದನ್ನೇ ವಿರೋಧಿಗಳು ದುರ್ಬೀನ್ ಹಾಕಿಕೊಂಡು ಹುಡುಕಿ ದೊಡ್ಡದು ಮಾಡುವುದು ಸರಿಯಲ್ಲ’ ಎಂದು ಗುರುಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಕಿವಿಮಾತು ಹೇಳಿದರು.

ಇಲ್ಲಿನ ಮೂರುಸಾವಿರ ಮಠದಲ್ಲಿ ಮಂಗಳವಾರ ಕರ್ತೃ ಜಗದ್ಗುರು ಗುರುಸಿದ್ದೇಶ್ವರ ಪೂಜಾ ಸೇವಾ ಸಮಿತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಉದ್ದೇಶಪೂರ್ವಕವಾಗಿ ಅಥವಾ ಸ್ವಾರ್ಥಕ್ಕಾಗಿ ನಾವು ತಪ್ಪು ಮಾಡಿಲ್ಲ. ಆದರೆ ಹೆಜ್ಜೆ ಹೆಜ್ಜೆಗೂ ತಪ್ಪುಗಳನ್ನು ಹುಡುಕುತ್ತಾ ಹೋದರೆ ನಿಮ್ಮ ಹಾಗೂ ನಮ್ಮ ಬೆಳವಣಿಗೆಗೆ ಸಹಕಾರಿಯಾಗುವುದಿಲ್ಲ’ ಎಂದು ವಿರೋಧಿಗಳಿಗೆ ಸೂಚ್ಯವಾಗಿ ಹೇಳಿದರು.

‘ನಿಂದಕರು ಇರಬೇಕು ಜಗದಲ್ಲಿ ಹಂದಿಯಂತೆ ಎಂಬ ದಾಸರ ವಾಣಿಯಂತೆ ತಪ್ಪು ಹುಡುಕುವವರು ಇದ್ದಾಗಲೇ ನಾವು ಸರಿಯಾದ ದಾರಿಯಲ್ಲಿ ನಡೆಯಲು ಸಾಧ್ಯ. ಬ್ಯಾಂಕಿನ ಕೆಟ್ಟ ಸಮಯ ಕಳೆದಿದೆ. ವೈಯಕ್ತಿಕ ಲಾಭಕ್ಕಾಗಿ ನಾವ್ಯಾರೂ ತಪ್ಪು ಮಾಡಿಲ್ಲ ಎಂದು ಗುರುಸಿದ್ದೇಶ್ವರನ ಸನ್ನಿಧಿಯಲ್ಲಿ ನಿಂತು ಹೇಳುತ್ತಿರುವುದಾಗಿ’ ತಿಳಿಸಿದರು.

‘ಬ್ಯಾಂಕನ್ನು ಉಳಿಸಿ, ಬೆಳೆಸಬೇಕು ಎಂಬ ಕಾರಣಕ್ಕೆ ಹಿತೈಷಿಗಳ ಕಿವಿಮಾತು ಮೀರಿ ನಷ್ಟದಲ್ಲಿದ್ದ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದು ಲಾಭದತ್ತ ಕೊಂಡೊಯ್ದೆವು. ಅದಕ್ಕೆ ಪ್ರತಿಫಲವಾಗಿ ವೃಥಾ ವಿರೋಧಿಗಳಿಂದ ಕಿರುಕುಳ ಅನುಭವಿಸಬೇಕಾಯಿತು. ಇನ್ನಾದರೂ ವಿಶಾಲ ಮನಸ್ಸಿನಿಂದ ಆಲೋಚಿಸುವ ಮನಸ್ಥಿತಿಯನ್ನು ವಿರೋಧಿಗಳು ಬೆಳೆಸಿಕೊಳ್ಳಲಿ’ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ‘ಮಾಧ್ಯಮಗಳು ಹಾಗೂ ನಮ್ಮದೇ ಸಮಾಜದ ಕೆಲವರು ಬ್ಯಾಂಕಿನ ವಿರುದ್ಧ ಷಡ್ಯಂತ್ರ ನಡೆಸಿದ ಪರಿಣಾಮ ಬಹಳಷ್ಟು ತೊಂದರೆ ಅನುಭವಿಸಬೇಕಾಯಿತು. ವಿರೋಧಿಗಳಿಗೆ ಬ್ಯಾಂಕ್ ಬೆಳೆಯುವುದು ಇಷ್ಟವಿಲ್ಲ’ ಎಂದರು.

‘ನಡೆಯುವವರು ಎಡವುತ್ತಾರೆ ಹೊರತು ಕುಳಿತವರು ಎಡವುದಿಲ್ಲ. ಪತ್ರಿಕೆ, ಟಿವಿಯಲ್ಲಿ ಏನೇ ಬಂದರೂ ಮತದಾರರು ಮಾತ್ರ ಅಚಲವಾಗಿ ನಿರ್ಧಾರ ಕೈಗೊಂಡು ಶಂಕರಣ್ಣ ಮುನವಳ್ಳಿ ಅವರ ತಂಡವನ್ನು ಗೆಲ್ಲಿಸಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಯಶಸ್ಸಿನ ಹಾದಿಯಲ್ಲಿರುವ ಸಹಕಾರಿ ಬ್ಯಾಂಕುಗಳ ಅಧ್ಯಯನ ನಡೆಸಿ ಅದೇ ರೀತಿಯ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಮಿತಿಯೊಂದನ್ನು ನೇಮಿಸುವಂತೆ’ ಆಡಳಿತ ಮಂಡಳಿಗೆ ಸಲಹೆ ನೀಡಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ, ಜಗಜ್ಯೋತಿ ಬಸವೇಶ್ವರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅನಿಲ ಕವಿಶೆಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ನೂತನ ಆಡಳಿತ ಮಂಡಳ ಸದಸ್ಯರಾದ ಫಕ್ಕೀರಪ್ಪ ಭೂಸದ, ಬಸವರಾಜ ಕೆ.ಕುರಡಗಿಮಠ, ವಿಜಯಾನಂದ ಹೊಸಕೋಟಿ, ಸ್ವಾಮಿ ಮಹಾಜನ ಶೆಟ್ಟರ, ಮಾರುತಿ ಜಾಧವ, ವೀರಣ್ಣ ಕಲ್ಲೂರ, ಮಹೇಶ ಟೆಂಗಿನಕಾಯಿ, ಅರವಿಂದ ಲಿಂಬಿಕಾಯಿ, ಲಕ್ಷ್ಮಿಕಾಂತ ಪಾಟೀಲ, ತಿಪ್ಪಣ್ಣ ಮಜ್ಜಗಿ, ಗೀತಾ ಮಳ್ಳೊಳ್ಳಿ ಹಾಗೂ ಪ್ರೇಮಾ ಆರಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಪೂಜಾ ಸಮಿತಿ ಅಧ್ಯಕ್ಷ ವೀರಣ್ಣ ಹಂಜಿ, ಉಪಾಧ್ಯಕ್ಷ ಚನ್ನಬಸಪ್ಪ ಧಾರವಾಡಶೆಟ್ಟರು, ಎಂ.ಎಸ್.ಶಿರಗಣ್ಣವರ, ಅಮರೇಶ ಹಿಪ್ಪರಗಿ, ಡಾ.ಜಗದೀಶ ಸಾಲಿಮಠ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.