ಶನಿವಾರ, ಮಾರ್ಚ್ 25, 2023
26 °C

ರಣಹದ್ದುಗಳ ಛಾಯಾಚಿತ್ರ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಚಿತ್ರಕಲಾ ಪರಿಷತ್‍ನಲ್ಲಿ ಹದ್ದುಗಳ ಲೋಕವೊಂದು ಅನಾವರಣಗೊಂಡಿದೆ.

ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಪರಿಸರ-ನಿಸರ್ಗ ಸಂರಕ್ಷಣಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ 'ಹದ್ದುಗಳ ಅದ್ಭುತ ಲೋಕ ಹಾಗೂ ಕೊರೊನಾ ಲೋಕ' ಎಂಬ ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಪರಿಷತ್ತಿನ ಆವರಣದಲ್ಲಿ ಇಟ್ಟಿರುವ ರಣಹದ್ದಿನ ಪ್ರತಿಕೃತಿಯು ಪಕ್ಷಿ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಿತ್ತು. ನಾಲ್ಕು ಗ್ಯಾಲರಿಗಳಲ್ಲಿ ರಣಹದ್ದುಗಳ 90 ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಚಿತ್ರಕಲಾ ಪರಿಷತ್‍ನ ಅಧ್ಯಕ್ಷ ಬಿ.ಎಲ್.ಶಂಕರ್, 'ಕೊರೊನಾ ಕಾಲಘಟ್ಟದಲ್ಲಿ ತೇಜಸ್ವಿ ಅವರ ಹೆಸರಿನಲ್ಲಿ ಪ್ರದರ್ಶನದ ಬಾಗಿಲು ಮತ್ತೆ ತೆರೆಯಲಾಗಿದೆ. ಪ್ರತಿವರ್ಷ ನಡೆಯುವ ಪ್ರದರ್ಶನದಲ್ಲಿ ಜೇಡ, ಬಾವಲಿ, ಗೂಬೆಗಳ ಕುರಿತಾದ ಚಿತ್ರಗಳು ಅನಾವರಣಗೊಂಡಿದ್ದವು. ಈ ಸಲ ಹದ್ದುಗಳ ಕುರಿತಾಗಿ ಪ್ರದರ್ಶನ ಏರ್ಪಡಿಸಿ, ವನ್ಯಜೀವಿ ಪ್ರೇಮಿ ಹಾಗೂ ಛಾಯಾಗ್ರಾಹಕರಾಗಿದ್ದ ತೇಜಸ್ವಿ ಅವರಿಗೆ ಗೌರವ ಸೂಚಿಸಲಾಗಿದೆ' ಎಂದರು.

'ಪ್ರಕೃತಿಯ ವಿಸ್ಮಯ, ನಿಗೂಢ ಪ್ರಾಣಿ, ಪಕ್ಷಿಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವುದೇ ಪ್ರದರ್ಶನದ ಉದ್ದೇಶ. 10 ದಿನಗಳ ಕಾಲ ತಜ್ಞರಿಂದ ವಿವಿಧ ಸಂವಾದಗಳು, ಕಿರುಚಿತ್ರ ಪ್ರದರ್ಶನ ನಡೆಯಲಿದೆ' ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು