ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರದಾನ ಶಿಬಿರ: ಕಣ್ಣುಗಳನ್ನು ದಾನ ಮಾಡಿ ಅಂಧರಿಗೆ ಬೆಳಕಾಗಬೇಕು– ನರೇನ್ ಶೆಟ್ಟಿ

Published 25 ಡಿಸೆಂಬರ್ 2023, 8:21 IST
Last Updated 25 ಡಿಸೆಂಬರ್ 2023, 8:21 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಯೊಬ್ಬರು ನೇತ್ರದಾನ ಮಾಡುವ ಮೂಲಕ ನಾಲ್ಕು ಜನ ಅಂಧರ ಬಾಳಿಗೆ ಬೆಳಕಾಗಬೇಕು ಎಂದು ನಾರಾಯಣ ನೇತ್ರಾಲಯದ ಉಪಾಧ್ಯಕ್ಷರಾದ ಡಾ ನರೇನ್ ಶೆಟ್ಟಿ ಹೇಳಿದರು. 

ಬಸವ-ವನ ಕ್ಷೇಮಾಭಿವೃದ್ಧಿ ಸಂಘ, ಬಸವ-ವನ ಮಹಿಳಾ ಸಂಘ ಮತ್ತು ಬಸವ-ವನ ನಗೆಕೂಟ ಹಾಗೂ ನಾರಾಯಣ ನೇತ್ರಾಲಯದ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ ಹಾಗೂ ನೇತ್ರದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ದೇವರು ಕೊಡಮಾಡಿದ ಅತ್ಯಮೂಲ್ಯ ಗಿಫ್ಟ್ ನಮ್ಮ ದೇಹವೇ ಆಗಿದ್ದು ಆ ದೇಹದ ಆರೈಕೆಯನ್ನು ನಾವೆಲ್ಲರೂ ಮಾಡಬೇಕಾದ ಅಗತ್ಯತೆಯನ್ನು ವಿವರಿಸಿದರು. ಈ  ದೇಹದಲ್ಲಿ ಜಗತ್ತನ್ನು ನೋಡುವಂಥ ಅತ್ಯಮೂಲ್ಯ ಗಿಫ್ಟ್ ಅಂದರೆ ಕಣ್ಣುಗಳು, ಆ ಕಣ್ಣುಗಳ ಆರೈಕೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ನೇತ್ರದಾನ ಶಿಬಿರ

ನೇತ್ರದಾನ ಶಿಬಿರ

ಬಸವ-ವನ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಗಂಗಾಧರ ವಾಲಿಯವರು, ಭುಜಂಗ ಶೆಟ್ಟಿಯವರ ಸಮಾಜಮುಖಿ ಸೇವೆ ಅವಿಸ್ಮರಣೀಯ ಹಾಗೂ ಅನುಕರಣೀಯ ಎಂದು ಹೇಳಿದರು. ಇಂದಿನ ಕಾರ್ಯಕ್ರಮ ಅವರ ಆಶಯದಂತೆ ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿದೆ. ಭುಜಂಗ ಶೆಟ್ಟಿ ಅವರು ಇಂದು ಭೌತಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ ಎಂದು ಹೇಳಿದರು.

174 ಜನರು ಉಚಿತವಾಗಿ ಕಣ್ಣಿನ ಪೊರೆ ಚಿಕಿತ್ಸೆ ಮಾಡಿಸಿಕೊಳ್ಳುವ ಪ್ರಯೋಜನ ಪಡೆದುಕೊಂಡರು. 51 ಜನರು ನೇತ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಡಾ ವೆಂಕಟಪ್ಪ, ಆಶಾದೇವಿ ಪಾಟೀಲ ಸೇರಿದಂತೆ ಇತರರು ಇದ್ದರು. ಶೋಭಾ ನಂಜುಂಡಸ್ವಾಮಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ದತ್ತಾತ್ರೇಯ ಜೋಶಿ ಸ್ವಾಗತ ಭಾಷಣ ಮಾಡಿದರು. ಸಂಜೀವಮೂರ್ತಿ ವಂದನಾರ್ಪಣೆ ಮಾಡಿದರು. 

ಶಿಬಿರದಲ್ಲಿ ಬಸವ-ವನ ಕ್ಷೇಮಾಭಿವೃದ್ಧಿ ಸಂಘ, ಬಸವ-ವನ ಮಹಿಳಾ ಸಂಘ ಮತ್ತು ಬಸವ-ವನ ನಗೆಕೂಟದ ಪದಾಧಿಕಾರಿಗಳು ಹಾಜರಿದ್ದರು. ನೂರಾರು ಸಂಖ್ಯೆಯಲ್ಲಿ ನಾಗರೀಕರು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT