ಮಂಗಳವಾರ, ಏಪ್ರಿಲ್ 20, 2021
31 °C

ಕಪ್ಪತ್ತಗುಡ್ಡಕ್ಕೆ ಮತ್ತೆ ಬೆಂಕಿ; 50 ಹೆಕ್ಟೇರ್ ಅರಣ್ಯ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಂಬಳ: ಹೋಬಳಿಯ ಡೋಣಿ ಗ್ರಾಮದ ಬಳಿಯ ಕಪ್ಪತಗುಡ್ಡದಲ್ಲಿ ಭಾನುವಾರ  ಬೆಂಕಿ ಕಾಣಿಸಿಕೊಂಡು, ಸುಮಾರು 50 ಹೆಕ್ಟೇರ್‌ ಅರಣ್ಯ ನಾಶವಾಗಿರುವ ಸಾಧ್ಯತೆ ಇದೆ.

ಬೆಂಕಿಯು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಾಣಿಸಿಕೊಂಡಿತು. ಇದನ್ನು ನಂದಿಸಲು ಸ್ಥಳೀಯರ ಜೊತೆ ಅರಣ್ಯ ಇಲಾಖೆಯ 80ಕ್ಕೂ ಹೆಚ್ಚು ಸಿಬ್ಬಂದಿ ಹರಸಾಹಸ ಪಟ್ಟರು. ಸುಮಾರು 7–8 ತಾಸು ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. 

‘ಸುಮಾರು 50 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿರುವ ಅಂದಾಜಿದೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಪ್ರದೀಪ ಪವಾರ ತಿಳಿಸಿದರು.

ಹೋಬಳಿಯ ಡೋಣಿ ಮತ್ತು ಡೋಣಿ ತಾಂಡಾದ ಬಳಿ ಜನವರಿ 25ರಂದು ಬೆಂಕಿ ತಗುಲಿ ಎಂಟು ಎಕರೆ ಅರಣ್ಯ ಪ್ರದೇಶ ನಾಶವಾಗಿತ್ತು. ಭಾನುವಾರ ಕೆಲೂರ ಗ್ರಾಮದ ಬಳಿ 15 ಹೆಕ್ಟೇರ್‌ ಅರಣ್ಯ ಪ್ರದೇಶ ನಾಶವಾಗಿದೆ. ಎರಡು ತಿಂಗಳಲ್ಲಿ ಮೂರು ಬಾರಿ ಕಪ್ಪತ್ತಗುಡ್ಡದ ವನ್ಯಸಂಪತ್ತು. ಬೆಂಕಿಯಿಂದ ಹಾನಿಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು