ಸಿಎ ಅಂತಿಮ ಪರೀಕ್ಷೆ: ಆದಿತ್ಯಗೆ 10ನೇ ರ್ಯಾಂಕ್

ಗದಗ: ಐಸಿಎಐ ಸಂಸ್ಥೆ ನಡೆಸುವ ಸಿಎ ಅಂತಿಮ ಪರೀಕ್ಷೆಯಲ್ಲಿ ಗದುಗಿನ ಆದಿತ್ಯ ಚಂದ್ರಶೇಖರ ಅಡಿಗ ದೇಶಕ್ಕೆ 10ನೇ ರ್ಯಾಂಕ್ ಪಡೆದಿದ್ದಾರೆ.
ಇವರು ನಗರದ ಕಲಾಮಂದಿರ ರಸ್ತೆ ನಿವಾಸಿ ಚಂದ್ರಶೇಖರ ಅಡಿಗ ಮತ್ತು ಸುಜಾತಾ ದಂಪತಿಯ ಮಗ.
‘ಎರಡನೇ ಪ್ರಯತ್ನದಲ್ಲಿ ಪರೀಕ್ಷೆ ಪೂರ್ಣಗೊಳಿಸುವುದರ ಜತೆಗೆ ಅಖಿಲ ಭಾರತ ಮಟ್ಟದಲ್ಲಿ 10ನೇ ರ್ಯಾಂಕ್ ಪಡೆದಿದ್ದು ತುಂಬ ಖುಷಿ ನೀಡಿದೆ. ಎಂಟು ವಿಷಯಗಳಲ್ಲಿ ಫೈನಾನ್ಶಿಯಲ್ ರಿಪೋರ್ಟಿಂಗ್, ಸ್ಟ್ರಾಟಿಜಿಕ್ ಅಂಡ್ ಫೈನಾನ್ಶಿಯಲ್ ಮ್ಯಾನೇಜ್ಮೆಂಟ್ ಹಾಗೂ ಅಡ್ವಾನ್ಸ್ಡ್ ಆಡಿಟಿಂಗ್ ವಿಷಯಗಳಿಗೆ ಆನ್ಲೈನ್ ಕೋಚಿಂಗ್ ಪಡೆದಿದ್ದ. ಉಳಿದ ವಿಷಯಗಳಿಗೆ ನಾನೇ ತಯಾರಿ ನಡೆಸಿದ್ದೆ’ ಎಂದು ಆದಿತ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಶೇ 56 ಅಂಕಗಳೊಂದಿಗೆ 10ನೇ ರ್ಯಾಂಕ್ ಪಡೆದಿದ್ದೇನೆ. ಕಾರ್ಪೊರೇಟ್ ಕ್ಷೇತ್ರದಲ್ಲಿ ಉದ್ಯೋಗ ಆರಂಭಿಸುವ ಯೋಜನೆ ಇದೆ’ ಎಂದು ಅವರು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.