ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಗಾಳಿ; ಮೊದಲ ಸ್ಥಾನದಲ್ಲಿ ಗದಗ

ಏರ್‌ ಕ್ವಾಲಿಟಿ ಇಂಡೆಕ್ಸ್‌ ಬುಲೆಟಿನ್‌ ಪ್ರಕಟ
Last Updated 16 ಜೂನ್ 2021, 16:25 IST
ಅಕ್ಷರ ಗಾತ್ರ

ಗದಗ: ದೇಶದಲ್ಲೇ ಉತ್ತಮ ಗುಣಮಟ್ಟದ ಗಾಳಿಯನ್ನು ಹೊಂದಿರುವ ನಗರಗಳಲ್ಲಿ ಗದಗ ಮುಂಚೂಣಿಯಲ್ಲಿದೆ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಏರ್‌ ಕ್ವಾಲಿಟಿ ಇಂಡೆಕ್ಸ್‌ ಬುಲೆಟಿನ್‌ನಲ್ಲಿ ಪ್ರಕಟಿಸಿದೆ.

ಜೂನ್‌ 15ರಂದು ದೇಶದ 131 ನಗರಗಳನ್ನು ಆಯ್ಕೆ ಮಾಡಿಕೊಂಡು 24 ತಾಸಿನಲ್ಲಿ‌ ಆಯಾ ನಗರಗಳು ಎಷ್ಟು ಪ್ರಮಾಣದ ನಿರುಪಯುಕ್ತ ಅಂಶಗಳನ್ನು ವಾತಾವರಣಕ್ಕೆ ಹೊರಸೂಸುತ್ತವೆ ಎಂಬ ವರದಿ ಆಧರಿಸಿ ಸ್ಥಾನ ನೀಡಲಾಗಿದೆ. ಇದು ಜೂನ್‌ 15ರ ಸಂಜೆ 4ರವರೆಗಿನ ಮಾಹಿತಿ ಮಾತ್ರ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಕೈಗಾರಿಕೆ, ವಾಹನಗಳ ಓಡಾಟ ಸೇರಿದಂತೆ ಇತರೆ ಮೂಲಗಳಿಂದ ಗದಗ ನಗರದಲ್ಲಿ ನೈಟ್ರೋಜನ್‌ ಡೈಆಕ್ಸೈಡ್‌ (NO2) ಮಾತ್ರ ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದೆ. ಕಾರಣ ಗದಗ ಜಿಲ್ಲೆ ಕೇವಲ 10 ಅಂಕವನ್ನು ಪಡೆದು ಮುಂಚೂಣಿಯಲ್ಲಿದೆ. ದೇಶದ ಇತರೆ ನಗರಗಳಲ್ಲಿ ಬೇರೆ ಬೇರೆ ಮಾಲಿನ್ಯಕಾರಕಗಳು ಬಿಡುಗಡೆಯಾಗುತ್ತಿವೆ ಹಾಗೂ ಇನ್ನೂ ಕೆಲವೊಂದು ನಗರಗಳ ವರದಿ ಬಂದಿಲ್ಲ ಎಂದು ಬುಲೆಟಿನ್‌ನಲ್ಲಿ ತಿಳಿಸಿದೆ.

ದೇಶದ ಒಟ್ಟು 45 ನಗರಗಳು ಉತ್ತಮ ಗುಣಮಟ್ಟದ ಗಾಳಿ
ಹೊಂದಿವೆ. 65 ನಗರಗಳಲ್ಲಿ ಸಮಾಧಾನಕರ ಮತ್ತು 21 ನಗರಗಳಲ್ಲಿ ಮಧ್ಯ ಕ್ರಮಾಂಕದಲ್ಲಿವೆ. ಯಾವುದೇ ನಗರಗಳು ಕಡಿಮೆ ಹಾಗೂ ಅತಿ ಕಡಿಮೆ ಕ್ರಮಾಂಕದಲ್ಲಿ ಇಲ್ಲ ಎಂದು ಬುಲೆಟಿನ್‌ನಲ್ಲಿ ತಿಳಿಸಿದೆ.

ಗದಗ ಜಿಲ್ಲೆಯ ಕಪ್ಪತಗುಡ್ಡ ಭಾಗಕ್ಕೆ ಒಳಪಡುವ ಶಿರಹಟ್ಟಿ ನಗರವು ಸ್ವಚ್ಛ ನಗರಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ ಎಂದು ತಿಳಿಸಲಾಗಿದೆ.

‘ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಬಂದಿರುವ NO2 ಕಡಿಮೆ ಮಾಲಿನ್ಯಕಾರಕಗಳಲ್ಲಿ ಇದೆ. ಆದರೆ, ವಾಯು ಗುಣಮಟ್ಟ ಸೂಚ್ಯಂಕ ಯಾವಾಗಲೂ 50 ಎಂಜಿ/ ಎಂ3ಗಿಂತ ಕಡಿಮೆ ಇದ್ದಾಗ ಅದು ಅತ್ಯುತ್ತಮ ವಾಯು ಎನಿಸಿಕೊಳ್ಳುತ್ತದೆ’ ಎಂದು ರಸಾಯನ ಶಾಸ್ತ್ರ ಉಪನ್ಯಾಸಕ ಆನಂದ ಜೂಚನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT