ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮೃತ್ಯುಂಜಯ ಶ್ರೀಗಳು ಮಹಿಮಾ ಪುರುಷರು’

ಕಲಾವಿದ ಮಹಾದೇವ ಎಂ.ಜಿ. ಹೊಸೂರಗೆ ‘ಮೃತ್ಯುಂಜಯ ಶ್ರೀ ಪ್ರಶಸ್ತಿ’ ಪ್ರದಾನ
Published 30 ಜುಲೈ 2023, 16:03 IST
Last Updated 30 ಜುಲೈ 2023, 16:03 IST
ಅಕ್ಷರ ಗಾತ್ರ

ಗದಗ: ‘ಮಣಕವಾಡದ ಗುರು ಮೃತ್ಯುಂಜಯ ಸ್ವಾಮೀಜಿ ಮಹಿಮಾ ಪುರುಷರು. ಅವರು ಹಲವು ಗ್ರಾಮಗಳಲ್ಲಿ ಹಲವು ಪವಾಡಗಳನ್ನು ಮಾಡಿದ್ದಾರೆ. ಅವರು ಇತರೆಲ್ಲರಿಗಿಂತ ಭಿನ್ನವಾಗಿದ್ದರು. ಕಾವಿ ತೊಡದೇ ಶ್ವೇತವಸ್ತ್ರಧಾರಿಯಾಗಿದ್ದರು’ ಎಂದು ಸಾಹಿತಿ, ಗುರು ಮೃತ್ಯುಂಜಯ ಸೇವಾ ಸಮಿತಿ ಸೌಹಾರ್ದ ಮಹಾಮನೆ ವೇದಿಕೆ ಅಧ್ಯಕ್ಷ ಐ.ಕೆ.ಕಮ್ಮಾರ ಹೇಳಿದರು.

ನಗರದ ಕನಕ ಭವನದಲ್ಲಿ ಭಾನುವಾರ ಮಣಕವಾಡದ ಮಹಿಮಾ ಪುರುಷ ಗುರು ಮೃತ್ಯುಂಜಯ ಸ್ವಾಮೀಜಿ ಸ್ಮರಣೋತ್ಸವದ ಅಂಗವಾಗಿ ಗುರು ಮೃತ್ಯುಂಜಯ ಸೇವಾ ಸಮಿತಿ ಸೌಹಾರ್ದ ಮಹಾಮನೆ ವೇದಿಕೆ ಅಡಿಯಲ್ಲಿ ಕೊಡ ಮಾಡುವ ರಾಜ್ಯ ಮಟ್ಟದ ‘ಮೃತ್ಯುಂಜಯ ಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಣಕವಾಡ- ಹಿರೇವಡ್ಡಟ್ಟಿ ಕ್ಷೇತ್ರದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಐ.ಕೆ.ಕಮ್ಮಾರ ಅವರು ಮುಸ್ಲಿಂ ಸಮುದಾಯವರಾದರೂ ಮಣಕವಾಡದ ಪೂಜ್ಯರ ಬಗ್ಗೆ ಅಪಾರ ಭಕ್ತಿ ಹೊಂದಿದವರು. ಅವರ ಬಗ್ಗೆ ಪುಸ್ತಕ ಬರೆದಿದ್ದಾರೆ. ಇದೀಗ ಎರಡು ವರ್ಷಗಳಿಂದ ಅವರ ಹೆಸರಿನಲ್ಲಿ ಕಲಾವಿದರು ಸೇರಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಅಭಿನಂದನಾರ್ಹ’ ಎಂದು ಹೇಳಿದರು.

ಸಾನ್ನಿಧ್ಯವಹಿಸಿದ್ದ ಅಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ನೀಲಮ್ಮ ತಾಯಿ ಅಸುಂಡಿ ಮಾತನಾಡಿ, ‘ಸಮಾಜದಲ್ಲಿ ಕಲಾವಿದರನ್ನು ಗುರುತಿಸಿ, ಅವರಿಗೆ ಗೌರವಿಸುವ ಕೆಲಸ ಬಹಳ ಶ್ರೇಷ್ಠವಾದುದು. ಸಮಾಜದ ಪ್ರತಿಯೊಬ್ಬ ಕಲಾವಿದರನ್ನು ಗೌರವಿಸುವಂತಾಗಬೇಕು’ ಎಂದು ಹೇಳಿದರು.

2023ನೇ ಸಾಲಿನ ಪ್ರಶಸ್ತಿಯನ್ನು ಬಾಗಲಕೋಟ ಜಿಲ್ಲೆ ಜಮಖಂಡಿ ತಾಲ್ಲೂಕಿನ ಹೊಸೂರ ಮೂಲದ ವೃತ್ತಿ ರಂಗಭೂಮಿ ಕಲಾವಿದ ಮಹಾದೇವ ಎಂ.ಜಿ. ಹೊಸೂರ ಅವರಿಗೆ ₹10 ಸಾವಿರ ನಗದು, ಫಲಕ ಒಳಗೊಂಡ ‘ಮೃತ್ಯುಂಜಯ ಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.

ಗದಗ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, ಗುರು ಮೃತ್ಯುಂಜಯ ಸೇವಾ ಸಮಿತಿ ಸೌಹಾರ್ದ ಮಹಾಮನೆ ವೇದಿಕೆ ಕೋಶಾಧ್ಯಕ್ಷ ಶಿವಶಂಕ್ರಪ್ಪ ಆರಟ್ಟಿ, ‘ಕಿತ್ತೂರ ಕರ್ನಾಟಕ’ ದಿನಪತ್ರಿಕೆ ಸಂಪಾದಕ ಮಂಜುನಾಥ ಬಸಪ್ಪ ಅಬ್ಬಿಗೇರಿ, ಚನ್ನಯ್ಯ ಹಿರೇಮಠ, ಪ್ರೊ.ಎಸ್.ವೈ. ಚಿಕ್ಕಟ್ಟಿ, ಮೃತ್ಯುಂಜಯ ಹಟ್ಟಿ, ರಾಯಪ್ಪ ನಾಗನೂರ, ಶರಣಪ್ಪಗೌಡ್ರ ಬಳ್ಳೊಳ್ಳಿ, ಪ್ರೊ.ಬಿ.ಕೆ.ಪೂಜಾರ ಇದ್ದರು.

ಬಳಿಕ ಬೆಂಗಳೂರಿನ ಕಡಬ ಶ್ರೀನಿವಾಸ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT