ಗುರುವಾರ , ಸೆಪ್ಟೆಂಬರ್ 29, 2022
26 °C

ಸೇತುವೆ ನಿರ್ಮಾಣಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ನಗರದ ಶ್ರೀನಿವಾಸ ಭವನದ ಹಿಂಬದಿಯಲ್ಲಿರುವ ಬಾಲಾಜಿ ಲೇಔಟ್‌ ನಿವಾಸಿಗಳು ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಸ್ಥಳೀಯ ಶಾಸಕ ಎಚ್‌.ಕೆ.ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬಾಲಾಜಿ ಲೇಔಟ್‌ನಲ್ಲಿ 30 ಮನೆಗಳಿದ್ದು, ಇದರ ಸುತ್ತಮುತ್ತಲಿನ ಬಡಾವಣೆಗಳಲ್ಲಿ 50 ನಿವೇಶನಗಳಿವೆ. ಇವೆಲ್ಲವುಗಳಿಗೂ ಶ್ರೀನಿವಾಸ ಭವನದ ಪಕ್ಕದಲ್ಲಿರುವ ಒಂದೇ ರಸ್ತೆ ಇರುತ್ತದೆ. ಜತೆಗೆ ಅಲ್ಲೇ ಹಳ್ಳ ಕೂಡ ಇದ್ದು, ಅದಕ್ಕೊಂದು ಸೇತುವೆ ಇದೆ. ಆದರೆ, ಸತತ ಮಳೆಯಿಂದಾಗಿ ಸೇತುವೆ ಶಿಥಿಲಗೊಂಡಿವೆ. ಹಳ್ಳದಲ್ಲಿ ಬಹಳಷ್ಟು ಗಿಡಗಳು ಬೆಳೆದಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಹೀಗಾಗಿ, ಸ್ವಲ್ಪ ಮಳೆಯಾದರೂ ಕೆಸರು ತುಂಬಿಕೊಳ್ಳುತ್ತದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಪ್ರಸ್ತುತ ಇಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗುತ್ತಿದ್ದು, ಈ ಬಡಾವಣೆಗೆ ಮತ್ತೊಂದು ಸೇತುವೆ ಅಗತ್ಯವಾಗಿ ಬೇಕಿದೆ. ಇಲ್ಲವಾದಲ್ಲಿ ಈ ಬಡಾವಣೆಯ ಜನರು ಮಳೆಗಾಲದಲ್ಲಿ ಹೊರ ಬರಲು ಸಾಧ್ಯವಾಗದೇ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ, ಶೀಘ್ರವೇ ಮತ್ತೊಂದು ಸೇತುವೆ ಹಾಗೂ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.