ಬುಧವಾರ, ಅಕ್ಟೋಬರ್ 21, 2020
25 °C

ಕೊಣ್ಣೂರು ಬಳಿ ಮುಳುಗಿದ ಹಳೆ ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ಸಂಜೆ ಒಂದು ತಾಸು ಭಾರಿ ಮಳೆಯಾಗಿದ್ದು ಕೊಣ್ಣೂರ ಬಳಿ ಮಲಪ್ರಭಾ ಹೊಳೆಯ ಹಳೆ ಸೇತುವೆ ಸಂಪೂರ್ಣ ಮುಳುಗಿದೆ. ಸುತ್ತಮುತ್ತಲಿನ ಜಮೀನುಗಳಲ್ಲಿನ ಬೆಳೆಗಳು ಜಲಾವೃತವಾಗಿವೆ.

ಅಲ್ಲಲ್ಲಿ ಮನೆಗಳು ಕುಸಿದಿವೆ. ಹಲವೆಡೆ ರಸ್ತೆಗಳು ಕಿತ್ತು ಹೋಗಿವೆ.

ಬೆಣ್ಣೆ ಹಳ್ಳದ ಆತಂಕ: ತಾಲ್ಲೂಕಿನ ಕುರ್ಲಗೇರಿ, ಸುರಕೋಡ, ಯಾವಗಲ್ ಬಳಿ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದೆ. ಯಾವಗಲ್ ಬಳಿ ಬೆಣ್ಣೆ ಹಳ್ಳ ಸೇತುವೆ ಮೇಲೆ ಹರಿದು ಎರಡು ಗಂಟೆ ಸಂಚಾರ ಬಂದ್‌ ಆಗಿತ್ತು. ಸಂಜೆ ಪ್ರವಾಹ ಕಡಿಮೆಯಾಗಿದ್ದರಿಂದ ಮತ್ತೆ ಸಂಚಾರ ಆರಂಭವಾಯಿತು.

ಅಕ್ಕಿ ಹಾನಿ: ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಾಯಿ ದಾಸೋಹ ಕೇಂದ್ರಕ್ಕೆ ಶನಿವಾರ ಮಳೆ ನೀರು ನುಗ್ಗಿದ ಪರಿಣಾಮ ಅಲ್ಲಿದ್ದ ಅಕ್ಕಿ ಚೀಲಗಳು ಹಾನಿಯಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.