ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್: ಗರಿಗೆದರಿದ ರಾಜಕೀಯ ಚಟುವಟಿಕೆ

ಪ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸಾಮಾನ್ಯ ಮೀಸಲಾತಿ
–ಚಂದ್ರು ಎಂ. ರಾಥೋಡ್
Published : 11 ಆಗಸ್ಟ್ 2024, 5:09 IST
Last Updated : 11 ಆಗಸ್ಟ್ 2024, 5:09 IST
ಫಾಲೋ ಮಾಡಿ
Comments

ನರೇಗಲ್: ಸ್ಥಳೀಯ ಪಟ್ಟಣ ಪಂಚಾಯ್ತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದೆ. ಎರಡೂ ಸ್ಥಾನಗಳಿಗೆ ಸಾಮಾನ್ಯ ಮೀಸಲಾತಿ ಬಂದಿರುವ ಕಾರಣ ಆಕಾಂಕ್ಷಿಗಳ ರಾಜಕೀಯ ಚಟುವಟಿಕೆಗಳು ತೆರೆಮರೆಯಲ್ಲಿ ಜೋರಾಗಿದೆ.

ಪಟ್ಟಣ ಪಂಚಾಯಿತಿಯ 17 ವಾರ್ಡುಗಳಿಗೆ 2019ರ ಮೇ 29ಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದರೆ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದೆ. ಬಿಜೆಪಿ 12 ಸ್ಥಾನಗಳನ್ನು, ಕಾಂಗ್ರೆಸ್ 3 ಸ್ಥಾನಗಳನ್ನು ಹಾಗೂ ಪಕ್ಷೇತರರು 2 ಸ್ಥಾನಗಳನ್ನು ಪಡೆದಿದ್ದರು. ಹಾಗಾಗಿ ಪ.ಪಂ. ಆಡಳಿತ ಚುಕ್ಕಾಣಿಕೆ ಬಿಜೆಪಿ ಪಾಲಾಗಿತ್ತು. 2.5 ವರ್ಷದ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ (ಎಸ್.ಸಿ) ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ನಿಗದಿಯಾಗಿತ್ತು.

ಮುಂಚೂಣಿಯಲ್ಲಿದ್ದ 16ನೇ ವಾರ್ಡಿನ ಬಿಜೆಪಿ ಸದಸ್ಯೆ ಅಕ್ಕಮ್ಮ ಮಣ್ಣೋಡ್ಡರ ಅವರು ಅಧ್ಯಕ್ಷರಾಗಿ ಹಾಗೂ 17ನೇ ವಾರ್ಡಿನ ಕುಮಾರಸ್ವಾಮಿ ಕೋರದಾನ್ಯಮಠ ಅವರು ಉಪಾಧ್ಯಕ್ಷರಾಗಿ 2.5 ವರ್ಷದ ಮೀಸಲಾತಿಯಲ್ಲಿ ಮೊದಲ ಅವಧಿಗೆ ಅಧಿಕಾರ ವಹಿಸಿಕೊಂಡರು. ಇದರಲ್ಲಿ ಪ್ರಬಲ ಪೈಪೋಟಿಯಾಗಿದ್ದ 6ನೇ ವಾರ್ಡಿನ ಬಿಜೆಪಿ ಸದಸ್ಯೆ ವಿಜಯಲಕ್ಷ್ಮೀ ಚಲವಾದಿ ಅವರು ಅಧ್ಯಕ್ಷರಾಗಿ ಹಾಗೂ 4ನೇ ವಾರ್ಡಿನ ಶ್ರೀಶೈಲಪ್ಪ ಬಂಡಿಹಾಳ ಅವರು ಉಪಾಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರವನ್ನು ಪಡೆದರು.

ಮೇ 5ಕ್ಕೆ ಅಧ್ಯಕ್ಷರ, ಉಪಾಧ್ಯಕ್ಷರ ಅಧಿಕಾರವಧಿ ಮುಗಿದ ಕಾರಣ ಪ.ಪಂ. ಗದ್ದುಗೆಗಾಗಿ ಬಕಪಕ್ಷಿಯಂತೆ ಕಾಯ್ದು ಕುಳಿತಿದ್ದರು. ಸದ್ಯ ಎರಡೂ ಸ್ಥಾನಗಳಿಗೆ ಸಾಮಾನ್ಯ ಎಂದು ಮೀಸಲಾತಿ ಪ್ರಕಟವಾಗಿದೆ. ರೋಣ ಮತಕ್ಷೇತ್ರದ ಶಾಸಕರು ಕಾಂಗ್ರೆಸ್‌ನವರು, ಹಾವೇರಿ ಲೋಕಸಭಾ ಸಂಸದರು ಬಿಜೆಪಿಯವರು. ಇಬ್ಬರು ಪಕ್ಷೇತರ ಸದಸ್ಯರಲ್ಲಿ ಒಬ್ಬರು ಕಾಂಗ್ರೆಸ್ ಇನ್ನೊಬ್ಬರು ಬಿಜೆಪಿಗೆ ಈ ಹಿಂದೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ, ಬಿಜೆಪಿಯು ಪಟ್ಟಣ ಪಂಚಾಯಿತಿ ಅಧಿಕಾರ ಗದ್ದುಗೆ ಏರುವುದು ಸ್ಪಷ್ಟವಾಗಿದೆ. ಬಿಜೆಪಿ ಸದಸ್ಯರ ಆಕಾಂಕ್ಷಿಗಳ ಚಿತ್ತ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಯತ್ತ ನೆಟ್ಟಿದೆ.

ಸಂಖ್ಯಾಬಲದ ಆಧಾರದ ಮೇಲೆ ಆಡಳಿತವು ಬಿಜೆಪಿ ಪಾಲಾಗುವುದು ಖಚಿತವಾಗಿದೆ. ಆದರೆ ಮೀಸಲಾತಿ ಪ್ರಕಟವಾದ ಕಾರಣ ನಾನಾ-ನೀನಾ ಎಂದು ಗದ್ದುಗೆ ಏರಲು ಪೈಪೋಟಿ ನೀಡಲು ಸಿದ್ದತೆ ನಡೆಸಿದ್ದಾರೆ. ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿರುವ ಬಿಜೆಪಿ ಸದಸ್ಯರ ನಡುವೆ ಮನಸ್ಥಾಪ ಉಂಟಾದರೆ, ಅಥವಾ ಬಿಜೆಪಿ ಮುಖಂಡರಲ್ಲಿ ಎರಡು ಮೂರು ಬಣಗಳಾಗಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದರೆ ಅದರ ಲಾಭ ಪಡೆದುಕೊಳ್ಳಲು ಕಾಂಗ್ರೆಸ್‌ ಮುಖಂಡು ವಿವಿಧ ತಂತ್ರಗಳನ್ನು ರೂಪಿಸಿ ಅಧಿಕಾರಿ ಪಡೆಯಬಹುದು. ಆದರೆ ಈ ಸಾಧ್ಯತೆ ತುಂಬಾ ಕಡಿಮೆ ಇದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.ಎರಡೂ ಸ್ಥಾನಗಳಿಗೆ ಸಾಮಾನ್ಯವೆಂದು ಮೀಸಲಾತಿ ಪ್ರಕಟವಾಗಿದೆ. ದಿನಾಂಕ ಪ್ರಕಟವಾದ ನಂತರ ಚುನಾವಣಾಧಿಕಾರಿಗಳು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸುತ್ತಾರೆ -ಮಹೇಶ ನಿಡಶೇಶಿ ಮುಖ್ಯಾಧಿಕಾರಿ ನರೇಗಲ್‌ ಪಟ್ಟಣ ಪಂಚಾಯಿತಿ

ಎರಡೂ ಸ್ಥಾನಗಳಿಗೆ ಸಾಮಾನ್ಯವೆಂದು ಮೀಸಲಾತಿ ಪ್ರಕಟವಾಗಿದೆ. ದಿನಾಂಕ ಪ್ರಕಟವಾದ ನಂತರ ಚುನಾವಣಾಧಿಕಾರಿಗಳು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸುತ್ತಾರೆ
-ಮಹೇಶ ನಿಡಶೇಶಿ ಮುಖ್ಯಾಧಿಕಾರಿ ನರೇಗಲ್‌ ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT