ಮುಂಡರಗಿ: ತಾಂಬ್ರಗುಂಡಿ ಗ್ರಾಮದ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಮಂಗಳವಾರ ಸಂಜೆ ಪಟ್ಟಣದ ನೀರಾವರಿ ಇಲಾಖೆಯ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.

ತುಂಗಭದ್ರಾ ನದಿಯು ಈಗ ತುಂಬಿ ಹರಿಯುತ್ತಿದ್ದು, ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಬ್ಯಾರೇಜು ಭರ್ತಿಯಾಗಿದೆ. ನಿತ್ಯ ಸಾವಿರಾರು ಕ್ಯುಸೆಕ್ ನೀರು ಬ್ಯಾರೇಜಿಗೆ ಹರಿದು ಬರುತ್ತಿದ್ದು, ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.

ನೀರನ್ನು ವ್ಯರ್ಥವಾಗಿ ನದಿಗೆ ಹರಿಸುವ ಬದಲು 100 ಎಕರೆ ವಿಸ್ತಾರದಲ್ಲಿರಿವ ತಾಂಬ್ರಗುಂಡಿ ಗ್ರಾಮದ ಕೆರೆ ತುಂಬಿಸಬೇಕು. ಇದರಿಂದ ಸುಮಾರು 600 ಎಕರೆ ಜಮೀನಿಗೆ ನೀರು ಹರಿಸಬಹುದಾಗಿದೆ. ತಕ್ಷಣ ಕೆರೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ತಾಂಬ್ರಗುಂಡಿ ಕೆರೆ ಸೇರಿದಂತೆ ತಾಲ್ಲೂಕಿನ ವಿವಿಧ ಕೆರೆಗಳನ್ನು ನದಿ ನೀರಿನಿಂದ ತುಂಬಿಸಿದರೆ ವರ್ಷದುದ್ದಕ್ಕೂ ಆಯಾ ಗ್ರಾಮಗಳ ರೈತರಿಗೆ ಅನಕೂಲವಾಗುತ್ತದೆ. ಜತೆಗೆ ಗ್ರಾಮಗಳ ಜನ ಹಾಗೂ ಜಾನುವಾರುಗಳಿಗೆ ನೀರು ದೊರೆಯಲಿದೆ ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಿವಾನಂದ ಇಟಗಿ, ರೈತ ಮುಖಂಡರಾದ ಹುಸೇನಸಾಬ ಕುರಿ, ಶರಣಪ್ಪ ಕಂಬಳಿ ,ಎ.ಎಸ್. ಅಂದ್ರಾಳ, ಅಮರೇಶ ಹಿರೇಮಠ ಇದ್ದರು.

ಕೆಲವು ತಾಂತ್ರಿಕ ಸಮಸ್ಯೆಗಳಿಂದ ತಾಂಬ್ರಗುಂಡಿ ಗ್ರಾಮದ ಕೆರೆಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಬುಧವಾರ ಕೆರೆಗೆ ನೀರು ಹರಿಸಲಾಗುವುದು
ಬಸವರಾಜ ನೀರಾವರಿ ಇಲಾಖೆಯ ಅಧಿಕಾರಿ

ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ತಾಂಬ್ರಗುಂಡಿ ಕೆರೆಗೆ ನೀರು ಹರಿಸಬೇಕು ಎಂದು ಕಳೆದ ವಾರ ರೈತರು ನೀರಾವರಿ ಇಲಾಖೆಯ ಮುಖ್ಯ ದ್ವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳು ವಾರದೊಳಗೆ ಕೆರೆಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೂ ಕೆರೆಗೆ ನೀರು ಹರಿಸದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.