ಗದಗ: 'ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು’ ಎಂದು ಹೇಳಿಕೆ ನೀಡಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ದೇಶದ್ರೋಹದ ಪ್ರಕರಣ ದಾಖಲಿಸಬೇಕು’ ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಆಗ್ರಹಿಸಿದರು.

‘ಈ ದೇಶದ ಸಂವಿಧಾನ ಯಾರನ್ನೂ ಅಗೌರವಿಸುವುದಿಲ್ಲ. ಯಾವುದೇ ಧರ್ಮ, ಧಾರ್ಮಿಕ ಭಾವನೆ, ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ನಿರಾಕರಿಸುವುದಿಲ್ಲ. ಹೀಗಿರುವಾಗ ಯಾರಾದರೂ ಈ ಸಂವಿಧಾನ ನಮಗೆ ಗೌರವ ಕೊಟ್ಟಿಲ್ಲ ಅಂದರೆ ಅದು ಮೂರ್ಖರ ಹೇಳಿಕೆ ಆಗುತ್ತದೆ. ಇದು ಸಂವಿಧಾನ ವಿರೋಧಿಯಷ್ಟೇ ಅಲ್ಲ; ದೇಶದ್ರೋಹದ ಕೆಲಸ ಕೂಡ ಆಗುತ್ತದೆ. ಪೇಜಾವರ ಶ್ರೀಗಳು ಇಂತಹ ಹೇಳಿಕೆಯನ್ನು ಒಬ್ಬ ವ್ಯಕ್ತಿಯಾಗಿ ಮಾಡಿಲ್ಲ. ಒಂದು ಸಂಸ್ಥೆಯಾಗಿ ಮಾಡಿದ್ದಾರೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ದೇಶದಲ್ಲಿ ದ್ವಿಮುಖ ನೀತಿ ಅನುಸರಿಸುತ್ತ ಬಂದಿದೆ. ಇಷ್ಟು ದಿನ ತನ್ನ ರಾಜಕೀಯ ಮುಖವಾಣಿಯಾದ ಬಿಜೆಪಿಯ ಸಂಸದರು, ಮಂತ್ರಿಗಳಿಂದ ಸಂವಿಧಾನ ವಿರೋಧಿ ಹೇಳಿಕೆಗಳನ್ನು ಕೊಡಿಸುವ ಕೆಲಸ ಮಾಡುತ್ತಿತ್ತು. ಈಗ ನೇರವಾಗಿ ಅಖಾಡಕ್ಕೆ ಇಳಿದಿದೆ. ಬಿಜೆಪಿಯ ಅಂಗ ಸಂಸ್ಥೆಯಾದ ವಿಎಚ್ಪಿ ಆಯೋಜಿಸಿದ್ದ ಸಂತರ ಸಮಾವೇಶದಲ್ಲಿ ಶ್ರೀಗಳು ರಾಜಕಾರಣದ ಭಾಷೆ ಆಡಿದ್ದಾರೆ. ಅವರು ಮಠ ತ್ಯಜಿಸಿ, ಆ ಪಕ್ಷದ ಪ್ರತಿನಿಧಿಯಾಗಿ ಮಾತನಾಡಿದರೆ ಗೌರವ ಸಿಗುತ್ತದೆ. ಅದು ಬಿಟ್ಟು ಸಂತರ ಸಮಾವೇಶದಲ್ಲಿ ಧಾರ್ಮಿಕ ಮುಖಂಡರಾಗಿ ಈ ದೇಶದ ಸಂವಿಧಾನ ಬದಲಿಸುವ ಮಾತುಗಳನ್ನು ಆಡಿರುವುದು ಅತ್ಯಂತ ಆಘಾತಕಾರಿ ಸಂಗತಿ’ ಎಂದು ಹೇಳಿದರು.

‘ಸಂವಿಧಾನ ಬದಲಿಸಬೇಕು ಎಂಬ ಮಾತುಗಳನ್ನು ಬಿಜೆಪಿ ರಾಷ್ಟ್ರೀಯ ಮುಖಂಡರು ಹಾಗೂ ಧಾರ್ಮಿಕ ಮುಖಂಡರು ಆಡುತ್ತಿದ್ದಾರೆ. ಜನರನ್ನು ವ್ಯವಸ್ಥಿತವಾಗಿ ದಿಕ್ಕು ತಪ್ಪಿಸುವ ಕೆಲಸವನ್ನು ತನ್ನ ಅಂಗ ಸಂಸ್ಥೆಗಳ ಮೂಲಕ ಮಾಡುತ್ತಿದೆ. ಇದು ಆರ್ಎಸ್ಎಸ್ನ ದ್ವಿಮುಖ ನೀತಿ ತೋರಿಸುತ್ತದೆ’ ಎಂದು ಟೀಕಿಸಿದರು.

‘ಉಡುಪಿ ಅಷ್ಟಮಠದವರು ಈ ದೇಶದ ಜನರನ್ನು ಸಮಾನವಾಗಿ ಕಂಡಿದ್ದೇ ಇಲ್ಲ. ಆ ಮಠದ ಆಚರಣೆ, ಪರಂಪರೆ ನೋಡಿದರೆ ಅದು ತಿಳಿಯುತ್ತದೆ. ಇವರಿಗೆ ಯಾವ ಕ್ಷೇತ್ರದಲ್ಲಿ ಗೌರವ ಕೊಟ್ಟಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

‘ಧಾರ್ಮಿಕ ಸಂಸ್ಥೆಗಳು ದೇಶವನ್ನು ಛಿದ್ರ ಮಾಡುವ ಕೆಲಸ ಮಾಡಿದರೆ, ಸಂವಿಧಾನ ಒಟ್ಟುಗೂಡಿಸುವ ಕೆಲಸ ಮಾಡಿದೆ. ಸಂವಿಧಾನ ಹೇಳಿದಂತೆ ಎಲ್ಲರೂ ಸಮಾನರು ಎಂಬ ವಿಚಾರ ಒಪ್ಪಿಕೊಳ್ಳಲು ಇವರು ಸಿದ್ಧರಿಲ್ಲ. ಆರ್ಎಸ್ಎಸ್, ವಿಎಚ್ಪಿ ಅಜೆಂಡಾ ಕೂಡ ಇದೇ ಆಗಿದೆ. ಅವರ ವಿಚಾರವನ್ನು ಸ್ವಾಮೀಜಿ ಬಾಯಲ್ಲಿ ಹೇಳಿಸುವ ಪ್ರಯತ್ನ ಮಾಡಿದ್ದಾರೆ. ಸಂವಿಧಾನ ಬದಲಿಸುವ ರೀತಿ ಹೇಳಿಕೆ ಕೊಡುವ ಸ್ವಾಮೀಜಿಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮುತ್ತು ಬಿಳೆಯಲಿ, ಶೇಖಣ್ಣ ಕವಳಿಕಾಯಿ, ಬಾಲರಾಜ ಅರಬರ, ಆನಂದ್ ಸಿಂಘಾಡಿ, ಷರೀಫ್ ಬಿಳೆಯಲಿ, ನಾಗರಾಜ್ ಗೋಕಾವಿ, ಶಿವಾನಂದ ತಮ್ಮಣ್ಣ, ಪರುಶು ಕಾಳೆ, ಅನಿಲ್ ಕಾಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.