ಗಜೇಂದ್ರಗಡ: ಪಟ್ಟಣದ ಜಗದಂಬಾ ವಿದ್ಯಾವರ್ಧಕ ಸಂಘದ ವಿ.ಟಿ.ರಾಯಬಾಗಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶನಿವಾರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಆಕಸ್ಮಿಕ ಅಗ್ನಿ ಅವಘಡ ನಡೆದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಣಕು ಪ್ರದರ್ಶನದ ಮೂಲಕ ಮಕ್ಕಳಿಗೆ ತಿಳಿವಳಿಕೆ ನೀಡಲಾಯಿತು.

ಅಗ್ನಿಶಾಮಕ ಇಲಾಖೆಯ ಠಾಣಾಧಿಕಾರಿ ಮಂಜುನಾಥ ಮೇಲ್ಮನಿ ಮಾತನಾಡಿ, ʼತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗ್ನಿ ಅವಘಡ ನಡೆದಾಗ ತಕ್ಷಣ 108 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವುದರ ಜೊತೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಕಟ್ಟಡಗಳಲ್ಲಿ ಅಗ್ನಿ ಅವಘಡ ನಡೆದರೆ ಬೆಂಕಿ ಆವರಿಸುವ ಮೊದಲು ಕಟ್ಟಡದಲ್ಲಿರುವ ಜನರನ್ನು ಹೊರಗಡೆ ಕರೆ ತರಬೇಕು. ಬೆಂಕಿ ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಹೊತ್ತಿಕೊಳ್ಳುತ್ತದೆ. ಎಲ್ಲ ತರಹದ ಬೆಂಕಿಗಳು ನೀರಿನಿಂದ ನಂದುವುದಿಲ್ಲ. ಕೆಲ ಬಾರಿ ನೀರಿನಿಂದ ಬೆಂಕಿ ಉಲ್ಬಣವಾಗುವ ಸಂಭವವಿರುತ್ತದೆ. ಹೀಗಾಗಿ ಅಗ್ನಿ ಅವಘಡ ನಡೆದಾಗ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಬೇಕುʼ ಎಂದರು.

ಅಗ್ನಿಶಾಮಕ ಇಲಾಖೆಯ ಠಾಣಾ ಹವಾಲ್ದಾರ್ ಮುತ್ತಣ್ಣ ಬೆಂಕಿ ನಂದಿಸುವ ಸುರಕ್ಷತಾ ಮಾರ್ಗಗಳು ಹಾಗೂ ಅವುಗಳ ವಿಧಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಅಧಿಕಾರಿ ಗೋವಿಂದ ದಂಡಿನ ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.