ಗದಗ: ತಾಲ್ಲೂಕಿನ ಬಳಗಾನೂರು ಗ್ರಾಮದ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಶಾಂತವೀರ ಶರಣರ ಸಾನಿಧ್ಯದಲ್ಲಿ ಮತ್ತು ನರಗುಂದ ಶಾಸಕ ಸಿ. ಸಿ. ಪಾಟೀಲ ಅವರ ನೇತೃತ್ವದಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ ಜರುಗಿತು.

ಈ ವೇಳೆ ಮಾತನಾಡಿದ ಶಾಸಕ ಸಿ. ಸಿ. ಪಾಟೀಲ, ಹೆಸ್ಕಾಂನ ಗದಗ ವಲಯದ ಅಧಿಕಾರಿಗಳು ಜನವರಿ 24, 25, 26 ರಂದು ಮೂರು ದಿನಗಳವರೆಗೆ ನಿರಂತರ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ವಿವಿಧ ಇಲಾಖೆಗಳ ವತಿಯಿಂದ ಶ್ರೀಮಠದ ಆವರಣದಲ್ಲಿ ವಿದ್ಯುತ್ ದ್ವೀಪದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಬೇಕು. ಲೋಕೋಪಯೋಗಿ ಇಲಾಖೆ ವತಿಯಿಂದ ಶ್ರೀಮಠದ ಮುಖ್ಯ ರಸ್ತೆಗೆ ಮತ್ತು ಆವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೆಂಪು ಮಣ್ಣು ಹಾಕಿ, ಹರಡಿಸುವ ವ್ಯವಸ್ಥೆ ಮಾಡಿಸಬೇಕು. ಈ ಮೂರು ದಿನಗಳಂದು ಸುಮಾರು 15 ಗಾಡಿ ನೀರಿನ ಟ್ಯಾಂಕರ್ಗಳನ್ನು ಪೂರೈಕೆ ಮಾಡಬೇಕು ಮತ್ತು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು ಎಂದು ಸೂಚಿಸಿದರು.

ವಾಹನ ನಿಲುಗಡೆ ವ್ಯವಸ್ಥೆಯನ್ನು ಅಚ್ಚುಕಟ್ಟುತನದಿಂದ ನಿಭಾಯಿಸಲು ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕುಮುಂಜಾಗ್ರತವಾಗಿ ಜನರಿಗೆ ತೊಂದರೆಯಾಗದಂತೆ ವೈದ್ಯರ ತಂಡವನ್ನು ನಿಯೋಜಿಸುವುದು ಮತ್ತು ವಿಶೇಷವಾಗಿ ಎರಡು ಅಂಬುಲೆನ್ಸಗಳನ್ನು ನಿಯೋಜನೆ ಮಾಡಬೇಕು ಎಂದರು.

ಅಲ್ಲದೆ, ಗದಗ-ಬಳಗನೂರ, ರೋಣ-ಬಳಗಾನೂರ(ವಾಯಾ ಸಂದಿಗವಾಡ, ಹೊನ್ನಾಪುರ, ಕದಡಿ ಮಾರ್ಗ) ಮತ್ತು ಗದಗ-ಲಿಂಗದಾಳ (ವಾಯಾ ಹೊಂಬಳ, ಲಿಂಗದಾಳ), ಬಳಗಾನೂರ-ನರಗುಂದ ( ವಾಯಾ ಬೆಳವಣಿಕಿ-ಯಾವಗಲ್) ಮಾರ್ಗವಾಗಿ ವಿಶೇಷ ಬಸ್ಸುಗಳನ್ನು ಓಡಿಸಬೇಕು. ಗಿ ಗದಗ-ಬಳಗಾನೂರ ಒಳಗಿನ ರಸ್ತೆಯನ್ನು, ಹುಯಿಲಗೋಳ-ಗಾವರವಾಡ ರಸ್ತೆಯನ್ನು ಮತ್ತು ಹೊಂಬಳ-ಬಳಗಾನೂರ ರಸ್ತೆಯನ್ನು ತಾತ್ಕಾಲಿಕವಾಗಿ ಮತ್ತು ತುರ್ತಾಗಿ ದುರಸ್ತಿ ಮಾಡಿಸಬೇಕೆಂದು ಹೇಳಿದರು. ಜಾತ್ರೆಯಲ್ಲಿ ಭಕ್ತರು ಹಾಗೂ ಗ್ರಾಮಸ್ಥರು ಸ್ವಚ್ಚತೆ ಕಾಪಾಡಲು ಹೆಚ್ಚು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿಸರು.

ವೇದಿಕೆ ಮೇಲೆ ಹುಲಕೋಟಿಯ ಗುರುನಾಥಗೌಡ ಓದುಗೌಡ್ರ, ಅರಹುಣಿಸಿಯ ಎಸ್. ಎಸ್. ಪಾಟೀಲ, ಗದುಗಿನ ವಸಂತಗೌಡ ಪೊಲೀಸಪಾಟೀಲ, ಪ್ರದೀಪ್ ನರಗುಂದ, ಡ. ಸ. ಹಡಗಲಿಯ ವಸಂತ ಮೇಟಿ, ಹೊನ್ನಾಪುರದ ಶಂಕರಗೌಡ ಪಾಟೀಲ, ಲಿಂಗದಾಳದ ಪ್ರದೀಪಗೌಡ ನವಲಗುಂದ, ಹುಲ್ಲೂರಿನ ವೀರಯ್ಯಜ್ಜನವರು ಹಿರೇಮಠ ಇದ್ದರು. ಈ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬಳಗನೂರು ಗ್ರಾಮದ ಗುರು-ಹಿರಿಯರು, ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.