ಗದಗ: ಅವಳಿ ನಗರದ ಯುವಜನರು ಬುಧವಾರ ಮಧ್ಯ ರಾತ್ರಿ 12 ಗಂಟೆಯಿಂದ ತಡರಾತ್ರಿವರೆಗೆ ಹೊಸ ವರ್ಷದ ಸಂಭ್ರಮದಲ್ಲಿ ಜೀಕಿದರು. ರೆಸ್ಟೊರೆಂಟ್ಗಳು, ಖಾಸಗಿ ತೋಟಗಳಲ್ಲಿ ಹೊಸ ವರ್ಷಾಚರಣೆ ಸಡಗರ ಜೋರಾಗಿತ್ತು.

2026ನೇ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಅವಳಿ ನಗರದ ಜನರು ಎರಡು ದಿನಗಳ ಮೊದಲಿನಿಂದಲೇ ಸಿದ್ಧತೆ ಆರಂಭಿಸಿದ್ದರು. ಹೊಸ ವರ್ಷವನ್ನು ಎಲ್ಲಿ ಆಚರಿಸಬೇಕು? ಎಷ್ಟು ಜನರು ಸ್ನೇಹಿತರು ಇರಬೇಕು? ಊಟಕ್ಕೆ ಏನೇನು ಇರಬೇಕು ಎಂಬುದರ ಕುರಿತು ಯೋಜನೆ ರೂಪಿಸಿಕೊಂಡಿದ್ದರು. ಅದರಂತೆ ಬುಧವಾರ ರಾತ್ರಿ ಸಿದ್ಧತೆ ಮಾಡಿಕೊಂಡು ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು.

ಹೊಸ ವರ್ಷಾಚರಣೆಗೆ ಕೇಕ್ಗಳೇ ಪ್ರಮುಖ ಆಕರ್ಷಣೆ. ಅವಳಿ ನಗರದಲ್ಲಿರುವ ಪ್ರಮುಖ ಬೇಕರಿಗಳಲ್ಲಿ ಸಾವಿರಾರು ಕೆ.ಜಿ. ಕೇಕುಗಳನ್ನು ಸಿದ್ಧಪಡಿಸಿ, ಮಾರಾಟಕ್ಕೆ ಇಡಲಾಗಿತ್ತು. ಮುಳಗುಂದ ನಾಕಾ ಸಮೀಪದ ಬೇಕರಿಯಲ್ಲಿ ಕೇಕ್ ಖರೀದಿಸಲು ಜನರು ಮುಗಿ ಬಿದ್ದಿದ್ದ ದೃಶ್ಯಗಳು ಕಂಡುಬಂದವು.

ಮದ್ಯ ಮಾರಾಟವೂ ಜೋರು: ಯುವಕರು, ವಯಸ್ಕರು ಹೊಸ ವರ್ಷಾಚರಣೆಗೆ ಸಾಕಷ್ಟು ಮದ್ಯ ಖರೀದಿಸಿದ್ದರು.

‘ಹೊಸ’ ಕುಡುಕರು ಬಿಯರ್ ಹೀರುತ್ತ; ನ್ಯೂ ಇಯರ್ಗೆ ಚಿಯರ್ಸ್ ಹೇಳಿದರು. ಅನುಭವಿ ಮದ್ಯಪ್ರಿಯರು ತಮ್ಮ ಅಭಿರುಚಿಗೆ ತಕ್ಕಂತೆ ವಿಸ್ಕಿ, ಬ್ರ್ಯಾಂಡಿ, ರಮ್ , ವೋಡ್ಕಾ ಮತ್ತು ಜಿನ್ಗಳನ್ನು ಆಯ್ಕೆ ಮಾಡಿಕೊಂಡು ಪಾರ್ಟಿ ಮಾಡಿದರು. ಮದ್ಯ ಸೇವನೆಗೆ ಚಿಕನ್, ಮಟನ್ ಮತ್ತು ಮೀನಿನ ಖಾದ್ಯಗಳು ಜತೆಯಾಗಿದ್ದವು.

ನಗರದ ಜವಳಗಲ್ಲಿಯಲ್ಲಿರುವ ಕೋಳಿ ಮತ್ತು ಕುರಿ ಮಾಂಸದ ಮಾರುಕಟ್ಟೆಯಲ್ಲಿ ಕೂಡ ಜನಜಂಗುಳಿ ಇತ್ತು. ಚಿಕನ್, ಮಟನ್ ಸೇರಿದಂತೆ ನೂರಾರು ಕ್ವಿಂಟಲ್ ಮಾಂಸ ಬಿಕರಿಯಾಯಿತು.

ಹೊಸ ವರ್ಷ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕೆಎಸ್ಆರ್ಪಿ, ಡಿಎಆರ್ ಮತ್ತು ಗೃಹ ರಕ್ಷಕರನ್ನು ನಿಯೋಜಿಸಲಾಗಿತ್ತು.

ಜಿಲ್ಲೆಯಾದ್ಯಂತ ಪೊಲೀಸ್ ಪೆಟ್ರೋಲಿಂಗ್, ಜನಸಂದಣಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬ್ಯಾರಿಕೇಡ್ ವ್ಯವಸ್ಥೆ, ಸಿಸಿಟಿವಿ ನಿಗಾ, ಡ್ರೋನ್ ಕ್ಯಾಮೆರಾ, ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮೂಲಕ ನಿಗಾ ವಹಿಸಿದ್ದರು.

‘ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ಅಶಾಂತಿ ಉಂಟುಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಸ್ಥಳಗಳಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.