ಗದಗ: ಇನ್ನು ಮುಂದೆ ಜಿಲ್ಲೆಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ಮಹಿಳೆಯರಿಗೆ ಮನೆಗೆ ಹೋಗಲು ಸಕಾಲದಲ್ಲಿ ವಾಹನ ಸಿಗದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ತಕ್ಷಣ ಸಹಾಯವಾಣಿ ಸಂಖ್ಯೆ 9480804400, 100 ಅಥವಾ 112ಕ್ಕೆ ಕರೆ ಮಾಡಿದರೆ ಸಾಕು. ಗದಗ ಜಿಲ್ಲಾ ಪೊಲೀಸರು ನೆರವಿಗೆ ಧಾವಿಸಲಿದ್ದಾರೆ. ಅಷ್ಟೇ ಅಲ್ಲ, ಪೊಲೀಸ್ ಗಸ್ತು ವಾಹನದಲ್ಲೇ ಸುರಕ್ಷಿತವಾಗಿ ಮನೆಗೆ ತಲುಪಿಸಲಿದ್ದಾರೆ.

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಅವರು, ಮಹಿಳೆಯರ ಸುರಕ್ಷತೆಗಾಗಿ ಜಿಲ್ಲೆಯಲ್ಲಿ ಇಂಥದ್ದೊಂದು ಯೋಜನೆಯನ್ನು ಡಿ.6ರಿಂದ ಜಾರಿಗೆ ತಂದಿದ್ದಾರೆ. ಈ ಸಹಾಯವಾಣಿಯು 24x7 ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ರಾತ್ರಿ ಯಾವುದೇ ಸಮಯದಲ್ಲಿ ಬೇಕಾದರೂ ತುರ್ತು ನೆರವಿನ ಅಗತ್ಯವಿದ್ದರೆ ಮಹಿಳೆಯರು ಈ ಸಹಾಯವಾಣಿಗೆ ನಿರ್ಭೀತಿಯಿಂದ ಕರೆ ಮಾಡಬಹುದು.

ಕೆಲವೊಮ್ಮೆ ದೂರದ ಊರುಗಳಿಂದ ನಗರಕ್ಕೆ ತಡರಾತ್ರಿ ಬಂದಿಳಿಯುವ ಮಹಿಳೆಯರು, ಮನೆಗೆ ಹೋಗಲು ಸಕಾಲದಲ್ಲಿ ವಾಹನ ಸಿಗದೆ ತೊಂದರೆ ಅನುಭವಿಸುತ್ತಾರೆ. ಇಂತಹ ಒಂಟಿ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಈ ಸಹಾಯವಾಣಿ ಪ್ರಾರಂಭಿಸಲಾಗಿದೆ. ದೇಶದಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಗದಗ ಜಿಲ್ಲಾ ಪೊಲೀಸರ ಈ ಕ್ರಮ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ.

‘ರಾತ್ರಿ ವೇಳೆ ಯಾವುದೇ ಅಪಾಯದ ಸನ್ನಿವೇಶ ಎದುರಾದರೆ ತಕ್ಷಣವೇ ಮಹಿಳೆಯರು ಸಹಾಯವಾಣಿ ಮೂಲಕ ಪೊಲೀಸರ ನೆರವು ಕೋರಬಹುದು’ಎಂದು ಎಸ್ಪಿ ಶ್ರೀನಾಥ ಜೋಶಿ ತಿಳಿಸಿದರು.

ಗದಗ ಜಿಲ್ಲಾ ಜಿಲ್ಲಾ ಪೊಲೀಸ್ ಫೇಸ್ಬುಕ್ ಪುಟದಲ್ಲಿ ಎಸ್ಪಿ ಶ್ರೀನಾಥ ಜೋಶಿ ಅವರು ಹಂಚಿಕೊಂಡ ಈ ಮಾಹಿತಿಯನ್ನು ಈಗಾಗಲೇ ನೂರಾರು ಜನರು ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲೂ ಈ ಸಹಾಯವಾಣಿ ಸಂಖ್ಯೆಗಳು ಅಗತ್ಯವಿರುವವರಿಗೆ ತಲುಪಿಸಿ ಎಂಬ ಅಡಿಬರಹದೊಂದಿಗೆ ವಿನಿಮಯ ಆಗುತ್ತಿದೆ.

‘ಇದೊಂದು ಜನಸ್ನೇಹಿ, ಮಾದರಿ ಕ್ರಮ. ಹೃದಯಪೂರ್ವಕ ಅಭಿನಂದನೆಗಳು’ ಎಂದು ಮಹಿಳೆಯೊಬ್ಬರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಹಾಯವಾಣಿ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.

ಕರೆ ಮಾಡಿದ ತಕ್ಷಣ ಸ್ಪಂದನೆ

ಸಹಾಯವಾಣಿಗೆ ಬರುವ ಕರೆಗಳನ್ನು ಸ್ವೀಕರಿಸುವ ಕಂಟ್ರೋಲ್ ರೂಂ ಸಿಬ್ಬಂದಿ, ತಕ್ಷಣವೇ ಆ ಮಾಹಿತಿಯನ್ನು ರಾತ್ರಿ ಕರ್ತವ್ಯದಲ್ಲಿರುವ ಪೊಲೀಸರಿಗೆ ರವಾನಿಸುತ್ತಾರೆ. ತಕ್ಷಣ ಕಾರ್ಯಪ್ರವೃತ್ತರಾಗುವ ಗಸ್ತು ಪೊಲೀಸರು ವಾಹನದೊಂದಿಗೆ ನಿರ್ದಿಷ್ಟ ಸ್ಥಳ ತಲುಪುತ್ತಾರೆ. ರಾತ್ರಿ ವೇಳೆ ನಗರದಾದ್ಯಂತ ಪೊಲೀಸರು ಗಸ್ತು ತಿರುಗುತ್ತಿರುತ್ತಾರೆ. ‘ಯಾವ ಪ್ರದೇಶದಿಂದ ನೆರವು ಕೋರಿ ಕರೆ ಬಂದರೂ ಕೆಲವೇ ನಿಮಿಷಗಳಲ್ಲಿ ಆ ಸ್ಥಳ ತಲುಪಬಹುದು. ಇದು ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸುತ್ತದೆ’ ಎನ್ನುತ್ತಾರೆ ಪೊಲೀಸರು.

ವಿಶೇಷವಾಗಿ, ಮಹಿಳೆಯರು ಈ ಸಹಾಯವಾಣಿ ಸಂಖ್ಯೆಯನ್ನು ತಮ್ಮ ಮೊಬೈಲ್ನಲ್ಲಿ ಸೇವ್ ಮಾಡಿ ಇಟ್ಟುಕೊಂಡಿರಬೇಕು. ತುರ್ತು ಸಂದರ್ಭದಲ್ಲಿ ಪೊಲೀಸರ ನೆರವು ಪಡೆಯಲು ಹಿಂಜರಿಯಬಾರದು

– ಶ್ರೀನಾಥ ಜೋಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.